ನ್ಯೂಸ್

ಸರ್ಕಾರ ನೆರವಿಗೆ ಬರುವವರೆಗೂ ರಸ್ತೆಗೆ ವಾಹನ ಇಳಿಸಲ್ಲ

ಬೆಂಗಳೂರು: ರಾಜ್ಯ ಸರ್ಕಾರ 6 ತಿಂಗಳ ರಸ್ತೆ ತೆರಿಗೆ ವಿನಾಯಿತಿ ಸೇರಿ ವಿವಿಧ ಬೇಡಿಕೆ ಈಡೇರಿ ಸುವವರೆಗೂ ಪ್ರವಾಸಿ ವಾಹನ, ಖಾಸಗಿ ಬಸ್​ಗಳನ್ನು ರಸ್ತೆಗೆ ಇಳಿಸದಿರಲು ರಾಜ್ಯ ಟ್ರಾವೆಲ್ ಆಪರೇಟರ್ ಸಂಘ ನಿರ್ಧರಿಸಿದೆ.

ಲಾಕ್ ಡೌನ್ ತೆರವಾಗಿ ವಾಹನ ಸಂಚಾರಕ್ಕೆ ಅನುಮತಿ ನೀಡಿದರೂ ನಾವು ವಾಹನಗಳನ್ನು ರಸ್ತೆಗೆ ಇಳಿಸುವುದಿಲ್ಲ. 2 ತಿಂಗಳಿಂದ ಆದಾಯ ಇಲ್ಲದೆ ಪ್ರವಾಸಿ ವಾಹನ ಹಾಗೂ ಖಾಸಗಿ ವಾಹನ ಮಾಲೀಕರು, ಚಾಲಕರು ಸಂಕಷ್ಟದಲ್ಲಿದ್ದಾರೆ. ಎಲ್ಲ ವಲಯಕ್ಕೂ ಪರಿಹಾರದ ಪ್ಯಾಕೇಜ್ ನೀಡಿರುವ ಸರ್ಕಾರ ಗಳು ಖಾಸಗಿ ಬಸ್ ಮಾಲೀಕರಿಗೆ ಯಾವುದೇ ರೀತಿಯ ನೆರವು ನೀಡಿಲ್ಲ. ನಮ್ಮ ನೆರವಿಗೆ ಬರುವವರೆಗೂ ಪ್ರವಾಸಿ ವಾಹನ, ಕಾಂಟ್ರ್ಯಾಕ್ಟ್, ಸ್ಟೇಜ್ ಆಧಾರಿತ ಖಾಸಗಿ ಬಸ್ಗಳನ್ನು ರಸ್ತೆಗೆ ಇಳಿಸದಿರಲು ತೀರ್ಮಾನಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ   ವೃದ್ಧರು, ಮಕ್ಕಳು ಹೊರಗೆ ಬರುವಂತಿಲ್ಲ ಆಯುಕ್ತರಿಗೆ ಮನವಿ ಸಲ್ಲಿಕೆ: ಪ್ರತಿ ವರ್ಷ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ರಸ್ತೆ ತೆರಿಗೆ ಪಾವತಿಸುತ್ತೇವೆ. ಆದರೆ, ಈಗಿನ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಗಳು ಖಾಸಗಿ ವಾಹನ ಮಾಲೀಕರ ಕೈ ಹಿಡಿಯದಿರುವುದು ನೋವಿನ ಸಂಗತಿ. ಎರಡು ತ್ರೖೆ ಮಾಸಿಕ ರಸ್ತೆಗೆ ತೆರಿಗೆ ವಿನಾಯಿತಿ ನೀಡಬೇಕು, ಆರು ತಿಂಗಳ ರಸ್ತೆ ತೆರಿಗೆಯಲ್ಲಿ ಶೇ.50 ವಿನಾಯಿತಿ ನೀಡಬೇಕು ಎಂಬುದು ಸೇರಿ ನಮ್ಮ ಬೇಡಿಕೆಗಳ ಪಟ್ಟಿಯನ್ನು ಸೋಮವಾರ ಸಾರಿಗೆ ಇಲಾಖೆ ಆಯುಕ್ತರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರ ಕನಿಷ್ಠ ಆರು ತಿಂಗಳು ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ಬ್ಯಾಡ್ಜ್ ಹೊಂದಿರುವ ಎಲ್ಲ ಚಾಲಕ ರಿಗೂ ಐದು ಸಾವಿರ ರೂ. ಪರಿಹಾರಧನ ನೀಡ ಬೇಕು. ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ವಾಹನಗಳನ್ನು ವಶಕ್ಕೆ ಪಡೆದು ಹಣ ಪಾವತಿಸಬೇಕು.

| ಬೈರವ ಸಿದ್ದರಾಮಯ್ಯ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘದ ಅಧ್ಯಕ್ಷ