ನವದೆಹಲಿ: 20 ದಿನಗಳವರೆಗೆ ಬಾಹ್ಯಾಕಾಶಯಾನದ ಬಳಿಕ ಭೂಮಿಗೆ ವಾಪಸ್ ಆದ ಭಾರತದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಆರೋಗ್ಯದಲ್ಲಿ ಸದ್ಯಕ್ಕೆ ಯಾವುದೇ ಏರುಪೇರು ಕಂಡುಬಂದಿಲ್ಲ ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗ್ತಿದ್ಯಾ? ಕಾಕ್ರೋಚ್ಗಳನ್ನು ಓಡಿಸಲು ಈ ಟ್ರಿಕ್ ಉಪಯೋಗಿಸಿ| lifestyle
ಅದರಂತೆ ಸೂಕ್ಷ್ಮ ಗುರುತ್ವಾಕರ್ಷಣೆಯ ಯಾವುದೇ ಪ್ರತಿಕೂಲ ಪರಿಣಾಮವನ್ನು ತಗ್ಗಿಸಲು ಒಂದು ವಾರದ ಪುನರ್ವಸತಿ ಕಾರ್ಯಕ್ರಮಕ್ಕಾಗಿ ಶುಕ್ಲಾ ಅವರನ್ನು ಹೂಸ್ಟನ್‌ಗೆ ಕರೆದೊಯ್ಯಲಾಯಿತು. ಇದನ್ನು ಆಕ್ಸಿಯಮ್‌ನ ಫ್ಲೈಟ್ ಸರ್ಜನ್ ನಿರ್ವಹಿಸುತ್ತಿದ್ದಾರೆ ಮತ್ತು ಇಸ್ರೋದ ಫ್ಲೈಟ್ ಸರ್ಜನ್ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಇಸ್ರೋ ತಿಳಿಸಿದೆ.
ಬಾಹ್ಯಾಕಾಶದಿಂದ ಗುರುತ್ವಾಕರ್ಷಣ ಶಕ್ತಿ ಇರುವ ಭೂಮಿಗೆ ಮರಳಿದ ನಂತರ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪುನಶ್ಚೇತನ ಶಿಬಿರ ಆಯೋಜನೆಗೊಂಡಿದೆ. ಇದರಲ್ಲಿ ಶುಭಾಂಶು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪಾಸಣೆ ನಡೆಯಲಿದೆ. ಸಹಜ ಬದುಕಿಗೆ ಮರಳಲು ಅವರನ್ನು ಸಜ್ಜುಗೊಳಿಸಲಾಗುವುದು ಎಂದು ತಜ್ಞರು ಹೇಳಿದ್ದರು.
ಬಾಹ್ಯಾಕಾಶ ನೌಕೆಯಿಂದ ಭೂಮಿಗೆ ಆಗಮಿಸುತ್ತಿದ್ದಂತೆ, ಕೂಡಲೇ ಚೇತರಿಕೆ ಹಡಗಿನಲ್ಲಿರುವ ಗಗನಯಾತ್ರಿಗಳ ಪ್ರಾಥಮಿಕ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.
(ಏಜೆನ್ಸೀಸ್)
20 ದಿನಗಳ ಬಾಹ್ಯಾಕಾಶ ಪ್ರಯಾಣದಲ್ಲಿ ಶುಕ್ಲಾ ಹಾಗೂ ಅವರ ತಂಡ 18 ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದರು. ಸುಮಾರು 60ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿದರು. ಇವುಗಳಲ್ಲಿ ಇಸ್ರೋ ಮತ್ತು ನಾಸಾ ಪ್ರಯೋಗಗಳೂ ಇದ್ದವು. ಈ ಅವಧಿಯಲ್ಲಿ ಇವರು 320 ಬಾರಿ ಭೂಮಿಯನ್ನು ಸುತ್ತಿದ್ದಾರೆ. ಹಾಗೆಯೇ 135.18 ಲಕ್ಷ ಕಿಲೋ ಮೀಟರ್ ದೂರವನ್ನು ಕ್ರಮಿಸಿದ್ದಾರೆ.