ಕಳಸದಲ್ಲಿ ಆಯೋಜಿಸಿದ್ದ ಮೂಡಿಗೆರೆ ಮತ್ತು ಕಳಸ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್ ಉದ್ಘಾಟಿಸಿದರು. ಕೆ.ಬಿ.ಶ್ರೀನಿವಾಸ್, ಎಚ್.ಎಸ್.ಶ್ರೀಕಾಂತ್, ಗೋಪಿನಾಥ್ ಪೈ, ಸುಜಯಸದಾನಂದ ಇದ್ದರು 
ನ್ಯೂಸ್

ಕಳಸ ತಾಲೂಕಿಗೆ ಇಬ್ಬರೇ ಕ್ರೀಡಾ ಶಿಕ್ಷಕರು

ಕಳಸ: ಸರ್ಕಾರ ಕ್ರೀಡೆಗೆ ವಿವಿಧ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಮುಖ್ಯವಾಗಿ ಬೇಕಾದ ಶಿಕ್ಷಕರನ್ನು ನೇಮಿಸುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಹೇಳಿದರು.
ಜೆಇಎಂ ಸಹಯೋಗದಲ್ಲಿ ಬುಧವಾರ ಕಳಸದಲ್ಲಿ ನಡೆದ ಮೂಡಿಗೆರೆ ಮತ್ತು ಕಳಸ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಕಳಸ ತಾಲೂಕಿನಲ್ಲಿ ಕೇವಲ ಇಬ್ಬರು ದೈಹಿಕ ಶಿಕ್ಷಕರಿದ್ದಾರೆ. ಮಕ್ಕಳಿಗೆ ಕ್ರೀಡೆಯನ್ನು ಕಲಿಸಲು ಶಿಕ್ಷಕರು ಇಲ್ಲದಿದ್ದರೆ ಮಕ್ಕಳು ಯಾವ ರೀತಿ ಕ್ರೀಡೆಯಲ್ಲಿ ಮುಂದುವರಿಯುತ್ತಾರೆ ಎಂದು ಪ್ರಶ್ನಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ, ಕ್ರೀಡೆ ಶಿಕ್ಷಣದ ಇನ್ನೊಂದು ಭಾಗ. ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯೂ ಮುಖ್ಯ.ಇಂತಹ ಕ್ರೀಡೆಯಿಂದ ಮಕ್ಕಳು ಮಾನಸಿಕವಾಗಿ ಸದೃಢರಾಗ ಬಲ್ಲರು ಎಂದರು.
ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಬಿ.ಶ್ರೀನಿವಾಸ್, ಜೆಇಎಂ ಶಾಲೆ ಅಧ್ಯಕ್ಷ ಎಚ್.ಎಸ್.ಶ್ರೀಕಾಂತ್, ಕಾರ್ಯದರ್ಶಿ ಗೋಪಿನಾಥ್ ಪೈ, ಕಳಸ ಗ್ರಾಪಂ ಮಾಜಿ ಅಧ್ಯಕ್ಷೆ ಸುಜಯಸದಾನಂದ, ವೀರೇಂದ್ರ ಜೈನ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಎಂ.ಕೆ.ವೇಣಿ,ಕೆಪಿಎಸ್ ಶಾಲೆ ಪ್ರಾಚಾರ್ಯ ಶಿವಕುಮಾರ್ ಸ್ವಾಮಿ, ಕಲ್ಲಾನೆ ನರೇಂದ್ರ, ಹಮೀದ್, ಪರಮೇಶ್ವರಪ್ಪ, ಜೆಇಎಂ ಮುಖ್ಯಶಿಕ್ಷಕ ಗೌರವ್, ಪ್ರಶಾಂತ್ ಇದ್ದರು.