ಕೋಲಾರ: ಕೋಲಾರ ಸಂಸದರಾಗಿ ಆಯ್ಕೆಯಾಗಿರುವ ಎಂ.ಮಲ್ಲೇಶ್ ಬಾಬು ಎದುರಿಗೆ ಸಾಲುಸಾಲು ಸವಾಲುಗಳಿದ್ದು, ಜನರ ಆಶೋತ್ತರಗಳಿಗೆ ಉತ್ತಮ ರೀತಿ ಸ್ಪಂದಿಸಬೇಕೆನ್ನುವ ನಿರೀಕ್ಷೆ ಹೆಚ್ಚಾಗಿದೆ.
ಕ್ಷೇತ್ರದ ಎಲ್ಲ ಜನರೊಂದಿಗೆ ನಿರಂತರ ಸಂಪರ್ಕ, ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸುವುದು ಹಾಗೂ ಕೇಂದ್ರ -ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸ ಮಾಡಬೇಕಾದ ಜವಾಬ್ದಾರಿ ಅಭ್ಯರ್ಥಿ ಎಂ.ಮಲ್ಲೇಶ್ಬಾಬು ಮೇಲಿದೆ. ಕ್ಷೇತ್ರದ ವ್ಯಾಪ್ತಿಗೆ ಕೋಲಾರ ಜಿಲ್ಲೆಯ 6 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಶಿಡ್ಲಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ, ಕೆಜಿಎ್, ಟೇಕಲ್ ಹಾಗೂ ಮಾಲೂರಿನಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಅದಕ್ಕೆ ವೇಗ ನೀಡಲು ಒತ್ತು ನೀಡಬೇಕಿದೆ.
ಶಿಡ್ಲಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರದಿಂದಲೂ ಅನುದಾನ ಬಿಡುಗಡೆಗೊಳಿಸಬೇಕಾಗಿದೆ. ರೈತರು ಪ್ರಮುಖವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಹೈನೋದ್ಯಮದ ಮೇಲೆ ಅವಲಂಬನೆೆಯಾಗಿದ್ದಾರೆ. ಉತ್ಪಾದನೆಯಾದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಇರುವುದರಿಂದ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ಕಂಗಾಲಾಗಿರುವ ರೈತರ ಆರ್ಥಿಕಮಟ್ಟ ಸುಧಾರಣೆಗೂ ಆದ್ಯತೆ ನೀಡಬೇಕಿದೆ.
ಕ್ಷೇತ್ರದಲ್ಲಿ ಬಹುತೇಕರು ಬಡತನ, ಸಾಮಾಜಿಕ, ಆರ್ಥಿಕ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಸಾಕಷ್ಟು ಕುಟುಂಬಗಳು ಕೂಲಿ ಮಾಡಿಯೇ ಜೀವನ ನಡೆಸುವ ಪರಿಸ್ಥಿತಿ ಇದೆ. ಕೆಲವರು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದು, ಹಲವರಿಗೆ ಕೆಲಸ ದೊರೆತಿದೆ. ಆದರೆ, ಜಿಲ್ಲೆಯ ಕೋಲಾರ ತಾಲೂಕಿನ ನರಸಾಪುರ, ವೇಮಗಲ್ ಹಾಗೂ ಮಾಲೂರು ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದರೂ ನಿರೀತ ಮಟ್ಟದಲ್ಲಿ ಸ್ಥಳಿಯ ವಿದ್ಯಾವಂತರಿಗೆ ಉದ್ಯೋಗ ದೊರೆತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದ್ದು, ಇದಕ್ಕೆ ನೂತನ ಸಂಸದರು ಹೇಗೆ ಸ್ಪಂದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
- ಕೇಂದ್ರದ ಮೇಲೆ ಒತ್ತಡ ಹೇರಬೇಕು
ಕೇಂದ್ರದಲ್ಲಿ ಯುಪಿಎ ಸರ್ಕಾರ ಅವಧಿಯಲ್ಲಿ ಕೆಜಿಎ್ನ ಬಿಜಿಎಂಎಲ್ ಗಣಿ ಮುಚ್ಚಲ್ಪಟ್ಟಿತು. ಆನಂತರ ನಿರುದ್ಯೋಗ ಸಮಸ್ಯೆ ತೀವ್ರಗೊಂಡು, ಇಲ್ಲಿಂದ ಬೆಂಗಳೂರಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದಾಗ ಕೈಗಾರಿಕೆ ಹಬ್ ನಿರ್ಮಾಣ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಕ್ರಮವಹಿಸಬೇಕಾಗಿದೆ.
- ರೈಲು ಮಾರ್ಗಗಳ ಹೆಚ್ಚಳಕ್ಕೆ ಕ್ರಮವಹಿಸಲಿ
ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಮೇಮು ರೈಲು ಬೆಳಗ್ಗೆ ಹಾಗೂ ಮಧ್ಯಾಹ್ನ ಸಂಚರಿಸುತ್ತಿದೆ. ಜನವರಿಯಲ್ಲಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ 6 ರೈಲುಗಳ ಸಂಚಾರ ಹೆಚ್ಚಿಸಲಾಗಿದೆ. ಈ ಸೌಕರ್ಯ ಕೋಲಾರಕ್ಕೆ ದೊರೆತಿಲ್ಲ. ಈ ಮಾರ್ಗಗಳನ್ನು ಹೆಚ್ಚಿಸಿದರೆ ಬೆಂಗಳೂರು, ದೇವನಹಳ್ಳಿ, ವೈಟ್ಫೀಲ್ಡ್ಗೆ ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ.
- ಎನ್ಸಿಸಿಗೆ ಜಾಗ ಮಂಜೂರು ಮಾಡಿಸಬೇಕು
ಜಿಲ್ಲೆಯಲ್ಲಿ 1964ರಲ್ಲಿ 10 ಕರ್ನಾಟಕ ಬಿಎನ್ಎನ್ಸಿಸಿ ಕಚೇರಿ ಸ್ಥಾಪನೆಯಾಗಿ 59 ವರ್ಷಗಳೇ ಕಳದಿದ್ದರೂ ಸ್ವಂತ ಸೂರು ಸೇರಿದೆ ಬಾಡಿಗೆ ಕಟ್ಟದಲ್ಲಿ ನಡೆಯುತ್ತಿದೆ. ದಶಕಗಳಿಂದ ಕಟ್ಟಡಕ್ಕೆ ಹಾಗೂ ಚಟುವಟಿಕೆ ನಡೆಸಲು ಸ್ವಂತ ಜಾಗ ಇಲ್ಲದೆ ಇರುವುದರಿಂದ ಎನ್ಸಿಸಿ ಕಚೇರಿಯನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಸ್ಥಳಾಂತರ ಆಗುವ ಆತಂಕವಿದೆ. ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳಿಗೆ ಬದ್ಧತೆಯಿಲ್ಲದ ಕಾರಣ ಎನ್ಸಿಸಿ ಕಚೇರಿಗೆ ಸ್ವಂತ ಜಾಗ ಕಲ್ಪಿಸಲು ಸಾಧ್ಯವಾಗಿಲ್ಲ. ಸ್ವಂತ ಜಾಗ ಕಲ್ಪಿಸಿ, ಕಟ್ಟಡ ನಿರ್ಮಿಸಿದರೆ ಸೈನಿಕರನ್ನು ತಯಾರಿಸಲು ಜಾಗ ಸಿಕ್ಕಿದಂತಾಗುತ್ತದೆ ಎಂಬುದು ಯುವಸಮುದಾಯದ ಅಭಿಪ್ರಾಯ.
- ಕಾಮಗಾರಿಯ ವೇಗ ಹೆಚ್ಚಿಸಿ
ಬೆಂಗಳೂರಿನಿಂದ ಚೆನ್ನೆ$ಗೆ ಕೋಲಾರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಈ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ನರಸಾಪುರ, ತಂಬಿಹಳ್ಳಿ ಸಮೀಪ ಅಭಿವೃದ್ಧಿ ಕೈಗೊಂಡಿರುವ ಕಾಮಗಾರಿ ಕುಂಟುತಾ ಸಾಗುತ್ತಿದ್ದು, ಇದಕ್ಕೆ ವೇಗ ಹೆಚ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಹನ ಸವಾರರು ಕೋರಿದ್ದಾರೆ.