ನ್ಯೂಸ್

ಸಿ.ಪಿ.ಯೋಗೇಶ್ವರ್​ ಮಂತ್ರಿಯಾಗದಿದ್ದರೂ ರಾರಾಜಿಸುತ್ತಲೇ ಇವೆ ನೂತನ ಸಚಿವರಿಗೆ ಅಭಿನಂದನೆ ಎಂಬ ಬ್ಯಾನರ್​ಗಳು...

ರಾಮನಗರ: ಸಿ.ಪಿ.ಯೋಗೇಶ್ವರ್​ಗೆ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿದೆ. ಹಾಗೇ ಅವರ ಬೆಂಬಲಿಗರಲ್ಲೂ ಅಸಮಾಧಾನವಿದೆ.

ಸಿ.ಪಿ.ಯೋಗೇಶ್ವರ್​ ಮಂತ್ರಿಯಾಗಿಯೇ ಆಗುತ್ತಾರೆ ಎಂದು ನಂಬಿಕೊಂಡಿದ್ದ ಅವರ ಬೆಂಬಲಿಗರು, ಅಭಿಮಾನಿಗಳು ಚೆನ್ನಪಟ್ಟಣ, ರಾಮನಗರ, ಬಿಡದಿಗಳಲ್ಲಿ ನೂತನ ಸಚಿವರಿಗೆ ಅಭಿನಂದನೆ ಎಂದು ಬರೆದುಕೊಂಡಿರುವ ಬ್ಯಾನರ್​ಗಳನ್ನು ಈ ಮೊದಲೇ ಹಾಕಿದ್ದರು.

ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ ಸಿಗದೆ ಇರುವ ಕಾರಣ ಬಿಡದಿಯ ಬಳಿಯಿರುವ ಬ್ಯಾನರ್​ಗಳನ್ನು ತೆಗೆದುಹಾಕಲಾಗಿದೆ. ಆದರೆ ಚೆನ್ನಪಟ್ಟಣದಲ್ಲಿ ಇನ್ನೂ ಹಾಗೇ ರಾರಾಜಿಸುತ್ತಿವೆ.