ನ್ಯೂಸ್

ಮಗ್ಗದ ಮನೆಯಲ್ಲಿ ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ದರೋಡೆ; ಕದ್ದದ್ದು ಮಾತ್ರ ಸೀರೆ-ಬಟ್ಟೆಯಲ್ಲ!

Webdesk - Athul Damale

ದೊಡ್ಡಬಳ್ಳಾಪುರ: ಮಗ್ಗದ ಮನೆಗೆ ನುಗ್ಗಿದ ಕಳ್ಳರು ಸಾವಿರಾರು ಮೌಲ್ಯದ ಮಗ್ಗದ ಸಾಮಗ್ರಿಗಳನ್ನು ಕಳುವು ಮಾಡಿರುವ ಘಟನೆ ನಗರದ ಮುಕ್ತಾಂಭಿಕಾ ಬಡಾವಣೆಯ ಬಳಿ 4ನೇ‌ ಕ್ರಾಸ್ ನಲ್ಲಿ ಮಧ್ಯರಾತ್ರಿ ನಡೆದಿದೆ.

ಪ್ರಶಾಂತ್ ರಾವ್ ಎಂಬುವರ ಮಗ್ಗದ ಮನೆಯ ಬಾಗಿಲನ್ನು ಸಲಾಕೆಗಳಿಂದ ಸುಮಾರು 15 ಸಾವಿರ ಮೌಲ್ಯದ ಮಗ್ಗದ ಸಾಮಾಗ್ರಿಗಳನ್ನು ದೋಚಿದ್ದಾರೆ. ಕಳ್ಳತನ ಕೃತ್ಯದಲ್ಲಿ ಸುಮಾರು 3-4 ಮಂದಿ ಕಳ್ಳರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಸೀರೆ‌ ಬಾರ್ಡರ್ ಜರಿಯನ್ನು ತಯಾರಿಸಲು ಬಳಸುವ ಪ್ರತಿಒಯೊಂದು ಕೋನ್ ಕೂಡ ಸುಮಾರು 15 ರಿಂದ 20 ಸಾವಿರ ಬೆಲೆಬಾಳುತ್ತದೆ. ಅಂತಹ 8 ಕೋನ್​ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ,

ಮೂರಂತಸ್ಥಿನ ಮನೆಯಲ್ಲಿ ತಳ ಮಹಡಿಯಲ್ಲಿ ಮಗ್ಗದ ಕೆಲಸ ಮಾಡಲಾಗುತ್ತಿತ್ತು. ಮೇಲ್ಮಹಡಿಯಲ್ಲಿ ಮಾಲೀಕರು ವಾಸವಿದ್ದರು. ಇಂದು ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಗ್ಗದ ಮಾಲೀಕರಾದ ಪ್ರಶಾಂತ್ ದೊಡ್ಡಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ.