ಕಲಬುರಗಿ: ಖಾಕಿಯನ್ನು ಕಂಡರೆ ಕಳ್ಳರು ದೂರ ಸರಿಯುವ, ಎಚ್ಚರಿಕೆ ವಹಿಸುವ ಸಂಗತಿ ಸಾಮಾನ್ಯದ್ದು. ಆದರೆ ಇಲ್ಲೊಂದು ಕಡೆ ಇಬ್ಬರು ಪೊಲೀಸರ ಮನೆಯಲ್ಲೇ ಖದೀಮರು ಕಳ್ಳತನ ನಡೆಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈ ಕಳವು ಪ್ರಕರಣ ನಡೆದಿದೆ.
ಕಲಬುರಗಿಯಲ್ಲಿನ ಇಬ್ಬರು ಪೊಲೀಸರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ನಿವೃತ್ತ ಕೆಎಸ್‌ಆರ್‌ಪಿ ಪೇದೆ ಸಿದ್ದಲಿಂಗಯ್ಯ ಹಿರೇಮಠ್ ಹಾಗೂ ಎಫ್‌ಡಿಎ ಮಹಾಂತೇಶ್ ಹಂಗರಗಿ ಮನೆಯಲ್ಲಿ ಕಳ್ಳತನ ನಡೆದಿದೆ. ಮಹಾಂತೇಶ್ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಎಫ್‌ಡಿಎ ಆಗಿದ್ದಾರೆ.
ಕಳ್ಳರು ಸಿದ್ದಲಿಂಗಯ್ಯ ಮನೆಯಲ್ಲಿ 10 ಗ್ರಾಂ ಚಿನ್ನ, 20 ಸಾವಿರ ನಗದು, 10 ರೇಷ್ಮೆ ಸೀರೆಯನ್ನು ಕದ್ದಿದ್ದರೆ, ಮಹಾಂತೇಶ್ ಮನೆಯಲ್ಲಿ 50 ಗ್ರಾಂ ಚಿನ್ನ, 10,000 ನಗದು ಹಾಗೂ 4 ಬೈಕ್‌ಗಳ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಖದೀಮರು ಕೈಚಳಕ ತೋರಿದ್ದು, ಇವರ ಕೃತ್ಯದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.