ನ್ಯೂಸ್

ಕಳವು ಆರೋಪಿ ಬಂಧನ

ಮುಳಬಾಗಿಲು: ಇತ್ತೀಚೆಗೆ ತಾಲೂಕಿನ ವಿ.ಹೊಸಹಳ್ಳಿಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ, 67 ಗ್ರಾಂ ಬಂಗಾರದ ಒಡವೆ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಎಚ್​.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ವಿ.ಹೊಸಹಳ್ಳಿಯ ವೇಣುಗೋಪಾಲ (35) ಬಂಧಿತ. ಕಳೆದ 15 ದಿನದ ಹಿಂದೆ ಮನೆಯಲ್ಲಿ ಕಳವು ಆಗಿತ್ತು, ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಮಾಲೀಕರು ದೂರು ಸಲ್ಲಿಸಿದ್ದರು.

ದೂರು ಆಧರಿಸಿ ಆರೋಪಿ ಪತ್ತೆಗಾಗಿ ಪೊಲೀಸ್​ ಅಧೀಕ್ಷಕ ಬಿ. ನಿಖಿಲ್​, ಹೆಚ್ಚುವರಿ ಪೊಲೀಸ್​ ಅಧೀಕ್ಷಕರಾದ ರವಿಶಂಕರ್​, ಜಗದೀಶ್​, ಮುಳಬಾಗಿಲು ಉಪವಿಭಾಗದ ಪೊಲೀಸ್​ ಉಪಾಧೀಕ್ಷಕ ಡಿ. ಸಿ. ನಂದಕುಮಾರ್​ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಜಿ.ಸತೀಶ್​, ಪಿಎಸ್​ಐ ಅರುಣ್​ ಗೌಡ ಪಾಟೀಲ್​, ಠಾಣೆಯ ಅಪರಾಧ ಸಿಬ್ಬಂದಿ ಎಚ್​.ಸಿ ಸುರೇಶ್​, ಪಿ.ಸಿ ಲಕ್ಷ್ಮೀನಾರಾಯಣ, ಚಾಲಕ ನಾಗಾರ್ಜುನ ಅವರು ಬಾತ್ಮಿದಾರರ ಮಾಹಿತಿ ಮೇರೆಗೆ ಕಳವು ಮಾಡಿದ್ದ ಆರೋಪಿಯನ್ನು ಮಾಲು ಸುಮೇತ ಪತ್ತೆ ಹಚ್ಚಿದ್ದಾರೆ.