ನ್ಯೂಸ್

'ಮಹಾವತಾರ ನರಸಿಂಹ' ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್‌ ಛಾವಣಿ ಕುಸಿತ; ಮೂವರಿಗೆ ಗಾಯ| Mahavatar-Narsimha

ಅಸ್ಸಾಂ: 'ಮಹಾವತಾರ ನರಸಿಂಹ' ಚಿತ್ರದ ಪ್ರದರ್ಶನದ ವೇಳೆ ಚಿತ್ರಮಂದಿರದ ಸೀಲಿಂಗ್ ಕುಸಿದು ಬಿದ್ದ ಪರಿಣಾಮ ಮಕ್ಕಳು ಸೇರಿದಂತೆ ಮೂವರು ಗಾಯಗೊಂಡ ಘಟನೆ ನಿನ್ನೆ(03) ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ.

ಗುವಾಹಟಿಯ ಪಿವಿಆರ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರೇಕ್ಷಕರು ಚಿತ್ರದಲ್ಲಿ ಮುಳುಗಿದ್ದಾಗ, ಫಾಲ್ಸ್ ಸೀಲಿಂಗ್‌ನ ಒಂದು ಭಾಗ ಇದ್ದಕ್ಕಿದ್ದಂತೆ ಅವರ ಮೇಲೆ ಕುಸಿದು ಬಿದ್ದಿದೆ. ಇನ್ನೂ ಚಿತ್ರಮಂದಿರದ ಒಳಗಿನ ದೃಶ್ಯಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

(ಏಜೆನ್ಸೀಸ್)

ವಿಡಿಯೋದಲ್ಲಿ, ಸೀಲಿಂಗ್ ಮತ್ತು ಗಾಜಿನ ಮುರಿದ ತುಂಡುಗಳು ಎಲ್ಲೆಡೆ ಹರಡಿಕೊಂಡಿರುವುದನ್ನು ಕಾಣಬಹುದು. ಥಿಯೇಟರ್​ ಒಳಗಿದ್ದ ಜನರು ತಮ್ಮ ಆಸನಗಳನ್ನು ಬಿಟ್ಟು ಭಯದಿಂದ ನಿಂತಿರುವುದನ್ನು ಕಾಣಬಹುದು. ಇನ್ನೂ ಈ ಘಟನೆ ಸಂಭವಿಸಿದ ಬಳಿಕ ಚಲನಚಿತ್ರದ ಪ್ರದರ್ಶನವನ್ನು ತಕ್ಷಣವೇ ನಿಲ್ಲಿಸಲಾಗಿದೆ ಮತ್ತು ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಪ್ರೇಕ್ಷಕರನ್ನು ಸುರಕ್ಷಿತವಾಗಿ ಚಿತ್ರಮಂದಿರದಿಂದ ಸ್ಥಳಾಂತರಿಸಲಾಗಿದೆ. ಈ ಘಟನೆಗೆ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ಮುಂದುವರೆದಿದೆ.