ಪ್ರಶಸ್ತಿಯೊಂದಿಗೆ ರೈತ ಎಂ.ಕೆ.ದೇವರಾಜು. 
ನ್ಯೂಸ್

ದೇವರಾಜುಗೆ ಸ್ಫೂರ್ತಿ ಯುವರತ್ನ ಪ್ರಶಸ್ತಿ

ಎಂ.ರವಿ

ಮದ್ದೂರು: ಜಿಲ್ಲಾ ಪ್ರಗತಿಪರ ರೈತ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಎಂ.ಕೆ.ದೇವರಾಜು ಅವರಿಗೆ ಸ್ಫೂರ್ತಿ ಕಲಾ ಟ್ರಸ್ಟ್‌ನಿಂದ ಕೊಡಮಾಡುವ ರಾಜ್ಯ ಮಟ್ಟದ ಸ್ಫೂರ್ತಿ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜು ಅವರು ರಾಜ್ಯ ಮಟ್ಟದ ಸ್ಫೂರ್ತಿ ಯುವರತ್ನ ಪ್ರಶಸ್ತಿಗೆ ಭಾಜನರಾಗಿದ್ದು ಕಲಾ ಸಂಘದಲ್ಲಿ ಟ್ರಸ್ಟ್‌ನ ಮುಖ್ಯಸ್ಥ ಸ್ಫೂರ್ತಿ ಮತ್ತು ಮಹಾದೇವಪ್ಪ ಸೇರಿದಂತೆ ಅನೇಕ ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.