ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ ಪಿ.ಜಿಯೊಂದರಲ್ಲಿ ವಾಸವಿದ್ದ ಯುವತಿಯೊಬ್ಬಳು ನಗ್ನವಾಗಿ ಓಡಾಡಿದ್ದು, ಯುವತಿಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರೀಕರಣ ಬೆನ್ನಲ್ಲೇ ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆ ತಾಂಡವವಾಡುತ್ತಿದೆ. ಇಲ್ಲೊಂದು ಪ್ರತಿಷ್ಠಿತ ಬಡಾವಣೆಯಲ್ಲಿ ಹಾಡುಹಗಲೇ ನಗ್ನಳಾಗಿ ಓಡಾಟ ನಡೆಸಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ನಗರದ ಪ್ರತಿಷ್ಠಿತ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಇಂತಹ ಘಟನೆ ನಡೆದಿದೆ.
ದಶಕಗಳ ಹಿಂದಿನಿಂದಲೂ ಇಲ್ಲಿನ ನಿವಾಸಿಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದರೆ ಎರಡು ವರ್ಷಗಳಿಂದ ಎಚ್‌ಎಸ್‌ಆರ್ ಬಡಾವಣೆಯ ಅಗರ ಏರಿಯಾದಲ್ಲಿ ಅಕ್ರಮ ಪಿ.ಜಿ ಗಳು ನಾಯಿಕೊಡೆಗಳಂತೆ ಎದ್ದು ನಿಂತಿವೆ. ಅವುಗಳಲ್ಲಿ ವಾಸ ಮಾಡುವ ಯುವತಿಯರು ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ರಾತ್ರಿಯಾದರೆ ಸಾಕು ಮದ್ಯದಪಾರ್ಟಿಯಲ್ಲಿ ನಶೆ ಏರಿಸಿಕೊಳ್ಳುವ ಯುವತಿಯರು ಬೆಳಗ್ಗೆ ಕೂಡ ನಶೆಯಲ್ಲಿಯೇ ನಗ್ನವಾಗಿ ಓಡಾಡುತ್ತಾರೆ. ಸಂಜೆಯಾಗುತ್ತಿದ್ದಂತೆ ಪಿಜಿ ಬಳಿ ಬರುವ ಯುವಕರ ಜತೆ ಯುವತಿಯರು ಹಾದಿಬೀದಿಯಲ್ಲಿಯೇ ರೋಮಾನ್ಸ್ ಮಾಡುತ್ತಾರೆ. ಇದರಿಂದಾಗಿ ಸ್ಥಳೀಯರು ಮನೆಯಿಂದ ಹೊರ ಬರಲು ಹೆದರುವಂತಾಗಿದೆ.
ಸ್ಥಳೀಯರ ಆಕ್ರೋಶ:
ನಗರ ಪ್ರದೇಶದಲ್ಲಿ ಜಿ ಪ್ಲಸ್ ತ್ರಿ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅವಕಾಶ ನೀಡುತ್ತದೆ. ಆದರೆ ಎಚ್‌ಎಸ್‌ಆರ್ ಬಡಾವಣೆ ಅಗರ ಏರಿಯಾದಲ್ಲಿ ಬಹುತೇಕ ಪಿಜಿಗಳು ಆರು ಮತ್ತು ಏಳು ಅಂತಸ್ತಿನ ಕಟ್ಟಡಗಳಾಗಿವೆ. ಯಾವುದೇ ಪ್ಲಾನ್ ಅಪ್ರೂವಲ್ ಕೂಡ ಇಲ್ಲದೆ ನಿರ್ಮಿಸಿರುವ ಕಟ್ಟಡ ಮಾಲೀಕರು ಕಾನೂನು ಬಾಹಿರವಾಗಿ ಮತ್ತು ಸ್ಥಳೀಯರ ವಿರೋಧದ ನಡುವೆ ಪಿ.ಜಿಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್, ನಗರ ಪೊಲೀಸ್ ಆಯುಕ್ತರು, ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರಿಗೆ, ಎಚ್‌ಎಸ್‌ಆರ್ ಬಡಾವಣೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೂ ಪಿ.ಜಿ ನಿವಾಸಿಗಳ ಅನಾಗರಿಕ ವರ್ತನೆಗೆ ಬ್ರೇಕ್ ಬಿದ್ದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.