ಬೆಳಗಾವಿ: ರಕ್ತದ ಕೊರತೆ ನೀಗಿಸುವಲ್ಲಿ ಯುವ ಸಮದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸದಸ್ಯ ಡಾ. ಎಸ್.ಎನ್.ಮೂಲಿಮನಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವರಕ್ತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅಗತ್ಯಕ್ಕೆ ತಂಕ್ಕಂತೆ ರಕ್ತದ ಲಭ್ಯತೆ ಇಲದಿದ್ದಾಗ ಯುವಕರು ಮುಂದೆ ಬಂದು ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸಿ ಜೀವದಾನ ಮಾಡುತ್ತಿದ್ದಾರೆ. ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ವ-ಇಚ್ಛೆಯಿಂದ ನಿರಂತರವಾಗಿ ರಕ್ತದಾನ ಮಾಡಬೇಕು. ಇನ್ನೊಬ್ಬರಿಗೆ ಜೀವದಾನ ಮಾಡುವುದಕ್ಕೆ ಉತ್ತೇಜಿಸುವುದೇ ರಕ್ತದಿನಾಚರಣೆ ಉದ್ದೇಶ. ರಕ್ತದಾನದ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಕಾಹೇರ್ ಎನ್‌ಎಸ್‌ಎಸ್ ಸಂಯೋಜಕಿ ಡಾ. ಅಶ್ವಿನಿ ನರಸಣ್ಣವರ, ರಕ್ತ ಭಂಡಾರದ ಮುಖ್ಯಸ್ಥ ಡಾ. ಎಸ್.ವಿ.ವಿರಗಿ, ಡಾ. ವಿಠ್ಠಲ ಮಾನೆ, ರೆಡ್ ಕ್ರಾಸ್ ಸಂಸ್ಥೆಯ ಡಾ. ಸೌಮ್ಯ ಮಾಸ್ತೆ, ಡಾ. ಸಯ್ಯದ್ ಕಿಲ್ಲೇದಾರ, ಶಕುಂತಲಾ ಕೋರೆ ಇತರರಿದ್ದರು. ಸುಮಾರು 200ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.