ಸೊರಬ ತಾಲೂಕಿನ ಹೊಸಬಾಳೆ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸದ್ಯರನ್ನು ಸನ್ಮಾನಿಸಲಾಯಿತು. ಮಧು ಬಂಗಾರಪ್ಪ, ಬಲ್ಕೀಷ್ ಬಾನು, ಕುಮಾರ್ ಉಮಟೆಗದ್ದೆ, ಪರಶುರಾಮಪ್ಪ ಇತರರಿದ್ದರು. 
ನ್ಯೂಸ್

ನಿರೀಕ್ಷೆಗೂ ಮೀರಿ ಸಹಕಾರ ಸಂಘಗಳ ಕಾರ್ಯ

ಸೊರಬ: ರೈತರ ಅಭಿವೃದ್ಧಿಗೆ ಸ್ಥಾಪಿಸಿರುವ ಸಹಕಾರ ಸಂಘಗಳು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಆಗಿರುವುದು ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಹೊಸಬಾಳೆ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ 75 ವರ್ಷಗಳಿಂದ ನಂಬಿಕೆ ಮತ್ತು ವಿಶ್ವಾಸದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಸೊರಬ ತಾಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನದಲ್ಲಿ ಕಾಮಗಾರಿ ಆರಂಭಿಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೂ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿ ನಡೆಸಲಾಗುವುದು ಎಂದರು.

ಎಂಎಲ್‌ಸಿ ಬಲ್ಕಿಷ್ ಬಾನು ಮಾತನಾಡಿ, ಸಹಕಾರ ತತ್ವದಡಿ ಸ್ಥಾಪನೆಯಾದ ಸಂಘಗಳು ರೈತರಿಗೆ ಅಗತ್ಯ ಸೌಲಭ್ಯ ಒದಗಿಸುತ್ತಿವೆ ಎಂದರು. ಅಮೃತ ಮಹೋತ್ಸವದ ಅಂಗವಾಗಿ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಪರುಶುರಾಮಪ್ಪ, ನಿರ್ದೇಶಕರಾದ ಲಿಂಗಪ್ಪ, ಜಿ.ಎ.ತೋಟಪ್ಪ, ಕೆರೆಸ್ವಾಮಿ ಗೌಡ, ಬಾಲಚಂದ್ರ, ಜಿ.ವೈ.ನಾಡಿಗೇರ್, ಮಂಜಪ್ಪ, ಕವಿತಾ, ಮಂಜಪ್ಪ ಬನದಕೊಪ್ಪ, ಎಂ.ಎಸ್.ತಿಮ್ಮಪ್ಪ, ಸಾವಿತ್ರಮ್ಮ, ಕ್ಷೇತ್ರಧಿಕಾರಿ ಎಂ.ಜಿ.ಶರಣಪ್ಪ, ಗ್ರಾಪಂ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಭುಜೇಂದ್ರ ಇತರರಿದ್ದರು.