ನ್ಯೂಸ್

ಹೆಂಡ್ತಿಯ ಹೆತ್ತವರು, ಇತ್ತ ಅಜ್ಜಿನೂ ಸಾವು! ಈ ನೋವಿನಿಂದ 3 ವರ್ಷ ಸಿನಿಮಾರಂಗದಿಂದ ದೂರವಾದ ಈ ಸ್ಟಾರ್​​ ನಟ ಯಾರು ಗೊತ್ತಾ? | Actor

Actor : ಸೂಪರ್ ಸ್ಟಾರ್ ಮಹೇಶ್ ಬಾಬು ಇಂದು ಆಗಸ್ಟ್ 9 ರಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಹೇಶ್ ಅವರ 50 ನೇ ಹುಟ್ಟುಹಬ್ಬ ಬರುತ್ತಿದ್ದಂತೆ, ತೆಲುಗು ರಾಜ್ಯಗಳಲ್ಲಿ ಮಹೇಶ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಸಂಭ್ರಮಪಡುತ್ತಾರೆ. ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ನಿರ್ದೇಶನದ ಎಸ್ಎಸ್ಎಂಬಿ 29 ಚಿತ್ರದಲ್ಲಿ ನಟಿಸುತ್ತಿದ್ದಾರೆ.

50 ರ ವರ್ಷದಲ್ಲೂ ಯುವಕನಂತೆ ಕಾಣುವ ಮಹೇಶ್​​ ಬಾಬು

ರಾಜ್​ಮೌಳಿ ನಿರ್ದೇಶನದ ಚಿತ್ರದಲ್ಲಿ ಮಹೇಶ್​ ಬಾಬು ನಟಿಸುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿ ನಿಂತಿದ್ದಾರೆ. ಸದ್ಯ ಮಹೇಶ್ ದಕ್ಷಿಣ ಭಾರತದ ಟಾಪ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ತಮ್ಮ 50 ನೇ ವರ್ಷದಲ್ಲೂ ಹುಡುಗನಂತೆ ಆಕರ್ಷವಾಗಿ ಜನರ ಗಮನ ಸೆಳೆದಿದ್ದಾರೆ.

3 ವರ್ಷಗಳಲ್ಲಿ 12 ಬ್ರಾಂಡ್​ಗಳಿಗೆ ರಾಯಭಾರಿ

ದಕ್ಷಿಣ ಭಾರತದಲ್ಲಿ ಅಧಿಕ ಸಂಭಾವನೆ ಪಡೆಯುವಂತ ನಟ ಮಹೇಶ್​ ಬಾಬು. ಇವರು 3 ವರ್ಷಗಳಲ್ಲಿ ಸುಮಾರು 12 ಬ್ರಾಂಡ್​ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಸ್ವತಃ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇನ್ನು ಪೊಕಿರಿ ಹಾಗೂ ಸೈನಿಕುಡು ಸಿನಿಮಾ ವರ್ಕ ಆಗಲಿಲ್ಲ. ಈ ಸಿನಿಮಾಗಳ ನಂತರ ಅಭಿಮಾನಿಗಳಿಗೆ ಹೇಗೆ ತೃಪ್ತಿಪಡಿಸಬೇಕು ಎಂಬುದು ನನಗೆ ತಿಳಿಯಲಿಲ್ಲ ಎಂದು ಹೇಳಿದ್ದರು.

ಆ 3 ವರ್ಷ ಏನಾಯ್ತು?

ಅದೇ ಸಮಯದಲ್ಲಿ ನನ್ನ ಅಜ್ಜಿ ನಿಧನರಾದರು. ನಮ್ರತಾಳ ಪಾಲಕರು ಕೂಡ ನಿಧನ ಹೊಂದಿದರು. ಈ ಸಮಯದಲ್ಲಿ ಈ ಒತ್ತಡವನ್ನು ಸುಧಾರಿಸುವುದು ಗೊತ್ತಿರಲಿಲ್ಲ. ಹಾಗಾಗಿ ಸಿನಿಮಾದಿಂದ 3 ವರ್ಷಗಳ ಕಾಲ ಹಿಂದುಳಿದಿದ್ದೆ. ಆಗ 12 ಬ್ರಾಂಡ್​ಗಳಿಗೆ ರಾಯಭಾರಿಯಾಗಿ ಸಹಿ ಹಾಕಿದ್ದರಿಂದ ಅದರಲ್ಲಿ ಸಂಪಾದನೆ ಮಾಡಿದ್ದೇನೆ. ನಂತರ ಕಲೀಜ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ ಇದು ಕೂಡ ಜನರ ಗಮನ ಸೆಳೆಯಲಿಲ್ಲ. ಇದಾದ ಬಳಿಕ ದೂಕುಡು ಚಿತ್ರದ ಮೂಲಕ ಮಹೇಶ್ ಬ್ಲಾಕ್ ಬಸ್ಟರ್ ಹಿಟ್ ಪಡೆದರು.

ಹೃದಯವಂತಿಕೆಯಲ್ಲಿ ಶ್ರೀಮಂತ ವ್ಯಕ್ತಿ ಮಹೇಶ್​ ಬಾಬು

ಮಹೇಶ್​ಬಾಬು ಅನೇಕ ಜಾಹಿರಾತುಗಳಿಂದ ಸಂಪಾದನೆ ಮಾಡಿದ್ದಾರೆ. ಇವರು ಮೌಂಟೇನ್ ಡ್ಯೂ ಬ್ರ್ಯಾಂಡ್ ಗೆ ಸುಮಾರು 12 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇವರು ಅನೇಕ ಬ್ರಾಂಡ್​ಗಳು ಹಾಗೂ ರಿಯಲ್​ ಎಸ್ಟೇಟ್​ ಗಳಿಗೆ ರಾಯಭಾರಿಯಾಗಿದ್ದಾರೆ. ಉದಾಹರಣೆಗೆ ಫೋನ್​ಪೇ, ಕೂಲ್​ಡ್ರಿಂಕ್ಸ್​, ಆಭರಣಗಳು ಸೇರಿದಂತೆ ಇನ್ನಿತರ ಜಾಹಿರಾತುಗಳಿಗೆ ರಾಯಭಾರಿಯಾಗಿದ್ದಾರೆ.

ಸಿನಿಮಾ, ಜಾಹೀರಾತು ಎರಡರಿಂದಲೂ ನೂರಾರು ಕೋಟಿ ಗಳಿಸುವ ಮಹೇಶ್ ಸೇವಾ ಕಾರ್ಯಕ್ರಮಗಳಲ್ಲೂ ಅಮೋಘ ಮನೋಭಾವ ತೋರುತ್ತಿದ್ದಾರೆ. ಹೃದಯ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಮಹೇಶ್ ಬಾಬು ಮರುಜನ್ಮ ನೀಡಿದ್ದಾರೆ. (ಏಜೆನ್ಸೀಸ್​)