Village President: 20 ಲಕ್ಷ ರೂ.ಪಡೆದ ಸಾಲ ತೀರಿಸಲಾಗದೇ ಗ್ರಾಮ ಪಂಚಾಯಿತಿ(ಗ್ರಾಪಂ) ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಟ್ಟ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿದೆ.
ಹೌದು, ಗುಣ ಜಿಲ್ಲೆಯ ಕರೋಡ್ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಅವರು ಸಾಲ ಮರುಪಾವತಿ ಮಾಡಲಾಗದೇ ಸಾಲ ಕೊಟ್ಟ ಅದೇ ಗ್ರಾಮದ ರಣವೀರ್ ಸಿಂಗ್ ಕುಶ್ವಾಹಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
2020ರಲ್ಲಿ ರಣವೀರ್ ಸಿಂಗ್ ಕುಶ್ವಾಹ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿಗೆ 20 ಲಕ್ಷ ರೂ. ಸಾಲ ನೀಡಿದ್ದಾನೆ. ಅಲ್ಲದೆ, ಸಾಲ ಕೊಡುವಾಗ ಕೆಲ ನಿಬಂಧನೆಗಳನ್ನು ವಿಧಿಸಿದ್ದಾನೆ. ಒಂದು ವೇಳೆ ಗ್ರಾಪಂ ಅಧ್ಯಕ್ಷರಾದರೆ ಸಾಲವನ್ನು ತೀರಿಸಲಾಗದೆ ಇದ್ದಾಗ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವುದಾಗಿ ಇಬ್ಬರ ನಡುವೆ ಒಪ್ಪಂದವಾಗಿದೆ. ಅಲ್ಲದೆ, ಈ ಕುರಿತು 100 ರೂ. ಸ್ಟ್ಯಾಂಪ್ ಪೇಪರ್ ಸಹಿ ಮಾಡುವ ಮೂಲಕ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಇದೀಗ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಗ್ರಾಪಂ ಅಧ್ಯಕ್ಷ ಸ್ಥಾನದ ಸೀಟ್ನಲ್ಲಿ ರಣವೀರ್ ಸಿಂಗ್ ಕುಶ್ವಾಹ ಕೂತಿರುವುದನ್ನು ಕಂಡ ಗ್ರಾಮಸ್ಥರು ಮೇಲಾಧಿಕಾರಿಗಳಿಗೆ ಹಾಗೂ ಪೊಲೀಸ್ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಇತನ್ನು ಬಂಧಿಸಿ ಕೇಸ್ ದಾಖಲು ಮಾಡಿದ್ದಾರೆ.(ಏಜೆನ್ಸೀಸ್)