ನ್ಯೂಸ್

ವಾರಾಂತ್ಯಕ್ಕೆ ಶುರು ಆರಿದ್ರಾ ಮಳೆ ಅಬ್ಬರ

Webdesk - Mallikarjun K R

| ಆರ್. ತುಳಸಿಕುಮಾರ್ ಬೆಂಗಳೂರು

ರಾಜ್ಯದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿದ್ದರೂ, ಕೆಲ ಪ್ರದೇಶಗಳಲ್ಲಿ ಮಳೆ ಕೊರತೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲೂ ಮಳೆರಾಯ ಅಬ್ಬರಿಸುವ ಆಶಾಭಾವ ಗೋಚರಿಸಿದೆ. ಜೂ.2ರಂದು ರಾಜ್ಯ ಪ್ರವೇಶಿಸಿದ್ದ ಮುಂಗಾರು ಮಾರುತ ಆರಂಭದಲ್ಲೇ ಉತ್ತಮ ಮಳೆ ಸುರಿಸಿದೆ. ಪೂರ್ವ ಮುಂಗಾರು ಅವಧಿಯಲ್ಲೂ ವಾಡಿಕೆಗಿಂತ ಶೇ.31ರಷ್ಟು ಮಳೆಯಾಗಿತ್ತು. ನದಿ, ಜಲಾಶಯ ಗಳಿಗೆ ಅಪಾರ ನೀರು ಹರಿದು ಬರಲಿದ್ದು, ಜನ-

ಜಾನುವಾರುಗಳಿಗೆ ಕುಡಿವ ನೀರು, ಮೇವಿನ ಕೊರತೆ ನೀಗಲಿದೆ. ವಾಡಿಕೆಯಷ್ಟೇ ಮಳೆ ಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ

ಕೂಡ ಹೇಳಿದೆ. ಸಾಮಾನ್ಯವಾಗಿ ಪೂರ್ವ ಮುಂಗಾರು ಉತ್ತಮ ಮಳೆ ಸುರಿಸಿದರೆ ಮುಂಗಾರು ಕೂಡ ಅದೇ ಹಾದಿಯಲ್ಲಿ ಮುಂದುವರಿಯುತ್ತದೆ ಎಂಬುದು ಪ್ರತೀತಿ. ಈ ಬಾರಿಯ ಪೂರ್ವ ಮುಂಗಾರು ಅವಧಿಯಲ್ಲಿ 3 ಜಿಲ್ಲೆಗಳಲ್ಲಿ ಅತಿ ಹೆಚ್ಚು, 18 ಜಿಲ್ಲೆಗಳಲ್ಲಿ ಹೆಚ್ಚು ಹಾಗೂ 10 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಮಳೆಯಾಗಿತ್ತು.

ತಾಲೂಕುವಾರು ಪೈಕಿ 47ರಲ್ಲಿ ಅತೀ ಹೆಚ್ಚು, 83ರಲ್ಲಿ ಹೆಚ್ಚು, 84ರಲ್ಲಿ ವಾಡಿಕೆ, 21ರಲ್ಲಿ ಕೊರತೆ ಹಾಗೂ 1 ತಾಲೂಕಿನಲ್ಲಿ ಅತೀ ಕೊರತೆ ಮಳೆ ದಾಖಲಾಗಿತ್ತು.

ಪೂರ್ವ ಮುಂಗಾರು ಮಳೆ ಮಾಹಿತಿ (ಮಿ.ಮೀ.ಗಳಲ್ಲಿ):

ಪ್ರದೇಶದ ಹೆಸರು ವಾಡಿಕೆ ವಾಸ್ತವ ಶೇ.ವಾರು

ಉತ್ತರ ಒಳನಾಡು 138 168 +22

ದಕ್ಷಿಣ ಒಳನಾಡು 79 102 +29

ಮಲೆನಾಡು 163 243 +49

ಕರಾವಳಿ 156 207 +33

ರಾಜ್ಯ ಸರಾಸರಿ 115 151 +31

(ಅಂಕಿ-ಅಂಶ: ಮಾ.1ರಿಂದ ಮೇ 31ರವರೆಗೆ)

ಜೂನ್ ತಿಂಗಳಲ್ಲಿ ಮಳೆ ವಿವರ (ಮಿ.ಮೀ.ಗಳಲ್ಲಿ):

ಪ್ರದೇಶದ ಹೆಸರು ವಾಡಿಕೆ ವಾಸ್ತವ ಶೇ.ವಾರು

ಉತ್ತರ ಒಳನಾಡು 49 88 +79

ದಕ್ಷಿಣ ಒಳನಾಡು 65 125 +92

ಮಲೆನಾಡು 193 120 -38

ಕರಾವಳಿ 454 311 -32

ರಾಜ್ಯ ಸರಾಸರಿ 116 132 13

(ಅಂಕಿ-ಅಂಶ: ಜೂನ್ 19ರವರೆಗೆ)

ಅತೀ ಹೆಚ್ಚು ಮಳೆಯಾದ ಜಿಲ್ಲೆಗಳು (ಜೂ.1-19):

ಜಿಲ್ಲೆ ಮಳೆ ಪ್ರಮಾಣ

ಬೀದರ್ 133.5 ಮಿ.ಮೀ.

ಕಲಬುರಗಿ 141.8 ಮಿ.ಮೀ.

ಯಾದಗಿರಿ 118.1 ಮಿ.ಮೀ.

ವಿಜಯಪುರ 163.1 ಮಿ.ಮೀ.

ಬಾಗಲಕೋಟೆ 136.5 ಮಿ.ಮೀ.

ಬೆಳಗಾವಿ 140.3 ಮಿ.ಮೀ.

ಕೊಪ್ಪಳ 110.5 ಮಿ.ಮೀ.

ರಾಯಚೂರು 114.5 ಮಿ.ಮೀ.

ಬಳ್ಳಾರಿ 137.7 ಮಿ.ಮೀ.

ವಿಜಯನಗರ 95.3 ಮಿ.ಮೀ.

ಚಿತ್ರದುರ್ಗ 68 ಮಿ.ಮೀ.

ತುಮಕೂರು 105.1 ಮಿ.ಮೀ.

ಚಿಕ್ಕಬಳ್ಳಾಪುರ 108.5 ಮಿ.ಮೀ.

ಕೋಲಾರ 116.4 ಮಿ.ಮೀ.

ಬೆಂಗಳೂರು ಗ್ರಾ. 103.2 ಮಿ.ಮೀ.

ಬೆಂಗಳೂರು ನಗರ 122.8 ಮಿ.ಮೀ.

ಮಂಡ್ಯ 77.5 ಮಿ.ಮೀ.

ಚಾಮರಾಜನಗರ 84.8 ಮಿ.ಮೀ.

ಹೆಚ್ಚು ಮಳೆಯಾಗಿರುವ ಜಿಲ್ಲೆಗಳು:

ಧಾರವಾಡ 104.6 ಮಿ.ಮೀ.

ಗದಗ 93.1 ಮಿ.ಮೀ.

ರಾಮನಗರ 81.4 ಮಿ.ಮೀ.

ವಾಡಿಕೆ ಮಳೆಯಾದ ಜಿಲ್ಲೆಗಳು:

ದಾವಣಗೆರೆ 60.8 ಮಿ.ಮೀ.

ಹಾಸನ 85.5 ಮಿ.ಮೀ.

ಮೈಸೂರು 69.2 ಮಿ.ಮೀ.

ಮಳೆ ಕೊರತೆ ಆಗಿರುವ ಜಿಲ್ಲೆಗಳು:

ಉತ್ತರಕನ್ನಡ 273.6 ಮಿ.ಮೀ. (ಶೇ. -27)

ದಕ್ಷಿಣಕನ್ನಡ 316.1 ಮಿ.ಮೀ. (ಶೇ. -37)

ಉಡುಪಿ 409.4 ಮಿ.ಮೀ. (ಶೇ. -34)

ಹಾವೇರಿ 57.8 ಮಿ.ಮೀ. (ಶೇ. -23)

ಶಿವಮೊಗ್ಗ 143.9 ಮಿ.ಮೀ. (ಶೇ. -43)

ಚಿಕ್ಕಮಗಳೂರು 97.2 ಮಿ.ಮೀ. (ಶೇ. -43)

ಕೊಡಗು 167.2 ಮಿ.ಮೀ. (ಶೇ. -40)

ಕರಾವಳಿ, ಮಲೆನಾಡಿಗೆ ಅಲರ್ಟ್: ಶನಿವಾರ (ಜೂ.22) ಆರಿದ್ರಾ ಮಳೆ ಅಡಿ ಇಡಲಿದೆ. ಈ ದಿನದಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಅತಿ ಭಾರೀ ಮಳೆಯಾಗುವ ಕಾರಣ ರೆಡ್ ಅಲರ್ಟ್ ನೀಡಲಾಗಿದೆ. ಇದೇ ರೀತಿ ಮಲೆನಾಡಿನ ನಾಲ್ಕೂ ಜಿಲ್ಲೆಗಳಲ್ಲಿ ಭಾನುವಾರ ಹಾಗೂ ಸೋಮವಾರ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ. ಇದೇ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ವರ್ಷಧಾರೆಯಾಗಿ ಇಡೀ ರಾಜ್ಯವನ್ನು ಆವರಿಸಿಕೊಳ್ಳಲಿದೆ.

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ವಾರಾಂತ್ಯದಿಂದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಜುಲೈನಲ್ಲಿ ಒಳ್ಳೆಯ ವರ್ಷಧಾರೆ ನಿರೀಕ್ಷಿಸಬಹುದಾಗಿದೆ. ಆಗಸ್ಟ್​ನಿಂದ ಮತ್ತೆ ಮಳೆ ಬಿರುಸುಗೊಳ್ಳಲಿದೆ. ಈ ವರ್ಷ ವಾಡಿಕೆ ಅಥವಾ ತುಸು ಹೆಚ್ಚಾಗಿಯೇ ಮಳೆಯಾಗಬಹುದು.| ಸಿ.ಎಸ್.ಪಾಟೀಲ್, ಹವಾಮಾನ ವಿಜ್ಞಾನಿಮಳೆ ಮಿಂಚು: ಪ್ರಸಕ್ತ ವರ್ಷದ ಜೂ. 1ರಿಂದ 19ರವರೆಗೆ ರಾಜ್ಯದಲ್ಲಿ ಸರಾಸರಿ ಶೇ.13ಕ್ಕಿಂತ ಹೆಚ್ಚು ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳು ವಾಡಿಕೆಗಿಂತ ಹೆಚ್ಚು ಮಳೆ ಕಂಡಿವೆ. ಆದರೆ, ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲಿ ಸರಾಸರಿ ಶೇ. -38 ಮಳೆ ಕೊರತೆ ಉಂಟಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿಯಲ್ಲೂ ಸರಾಸರಿ ಶೇ. -32ರಷ್ಟು ಕೊರತೆ ಕಂಡಿದೆ.