ನ್ಯೂಸ್

'ದಿ ವ್ಯಾಕ್ಸಿನ್ ವಾರ್' ಬಾಕ್ಸ್ ಆಫೀಸ್ ಕಲೆಕ್ಷನ್ ಡೌನ್​​; 5ನೇ ದಿನದಂದು ಚೇತರಿಕೆ ಕಾಣಲಿದ್ಯಾ ವಿವೇಕ್ ಅಗ್ನಿಹೋತ್ರಿ ಫಿಲ್ಮ್?

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವಾಕ್ಸಿನ್ ವಾರ್' ಚಿತ್ರವು ಶನಿವಾರ, ಅಂದರೆ 30 ಅಕ್ಟೋಬರ್ 2023 ರಂದು ರೂ. 1.50 ಕೋಟಿ ಕಲೆಕ್ಷನ್ ದಾಖಲಿಸುವ ಮೂಲಕ ಚೇತರಿಕೆ ಕಂಡಿತ್ತು. 28 ಅಕ್ಟೋಬರ್ 2023 ರಂದು ಗುರುವಾರ ಭಾರತದಾದ್ಯಂತ ಬಿಡುಗಡೆಯಾ 'ದಿ ವಾಕ್ಸಿನ್ ವಾರ್' ಚಿತ್ರ, ಮೊದಲ ದಿನ 85 ಲಕ್ಷ ಕಲೆಕ್ಷನ್​​ ಮಾಡಿತ್ತು. ಮಾರನೇ ದಿನ, 29 ರಂದು 90 ಲಕ್ಷ ಮಾತ್ರ ಗಳಿಸಿತ್ತು. ಇದೀಗ ಚಿತ್ರ ಹತ್ತು ಕೋಟಿಯ ಗಳಿಕೆ ಮಾಡುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. 'ದಿ ವ್ಯಾಕ್ಸಿನ್ ವಾರ್' ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ.


ಸುಮಾರು 10 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಅನುಪಮ್ ಖೇರ್, ನಾನಾ ಪಾಟೇಕರ್, ಸಪ್ತಮಿ ಗೌಡ ಮತ್ತು ಪಲ್ಲವಿ ಜೋಶಿಯಂತಹ ನಟರು ನಟಿಸಿರುವ ಚಿತ್ರವು ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.


ಕೊರೊನಾ ಕರಿಛಾಯೆ ದೇಶಾದ್ಯಂತ ಹರಡಿದ್ದ ಸಂದರ್ಭದಲ್ಲಿ ತಮ್ಮ ಜೀವವನ್ನೂ ಉತ್ತೆಯಿಟ್ಟು ಕಾರ್ಯ ನಿರ್ವಹಿಸಿದ ವೈದ್ಯರು, ವಿಜ್ಞಾನಿಗಳಿಗಾಗಿ ಈ ಚಿತ್ರವನ್ನ ಸಮರ್ಪಿಸಲಾಗಿದೆ. ಲಸಿಕೆಗಳ ಅಭಿವೃದ್ಧಿಯ ಹಿಂದೆ ಭಾರತೀಯ ವಿಜ್ಞಾನಿಗಳ ಹೋರಾಟದ ಕುರಿತು 'ದಿ ವ್ಯಾಕ್ಸಿನ್ ವಾರ್' ಚಿತ್ರದಲ್ಲಿ ಹೆಚ್ಚಿನ ಬೆಳಕು ಚೆಲ್ಲಲಾಗಿದೆ.


ವಿವೇಕ್ ಅಗ್ನಿಹೋತ್ರಿ-ನಿರ್ದೇಶನದ ಈ ಚಿತ್ರ ಕೇವಲ 1.3 ಕೋಟಿ ರೂಪಾಯಿಯ ಗಳಿಕೆಯೊಂದಿಗೆ ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತು. 'ಫುಕ್ರೆ 3' ಮತ್ತು ಕಂಗನಾ ರಣಾವತ್ ಅವರ 'ಚಂದ್ರಮುಖಿ 2' ಜೊತೆಗೆ ಬಿಡುಗಡೆಯಾಗಿದ್ದು, ಅಕ್ಟೋಬರ್ 2 ರಂದು 1.50 ಕೋಟಿ ರೂ ಕಲೆಕ್ಷನ್​ ಮಾಡಿದೆ. ಚಿತ್ರದ ಒಟ್ಟು ಕಲೆಕ್ಷನ್ ಈಗ 7.25 ಕೋಟಿ ರೂ. ಆಗಿದ್ದು, ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಕೋವಾಕ್ಸಿನ್ ಲಸಿಕೆ ಅಭಿವೃದ್ಧಿಯ ಕಥೆಯನ್ನೂ ಚಿತ್ರದಲ್ಲಿ ತೋರಿಸಲಾಗಿದೆ.