ನ್ಯೂಸ್

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಿದ್ಧತೆ !

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ವೆಂಕಟೇಶ್ವರ ದೇವಾಲಯ ಬಾಗಿಲು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಮೇ 17ರಂದು ಮೂರನೇ ಹಂತದ ಲಾಕ್​ಡೌನ್ ಮುಗಿದ ನಂತರ ಸ್ಥಳೀಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ತಿಳಿಸಲಾಗಿದೆ. ಪ್ರತಿ ದಿನ 14 ಗಂಟೆಗಳ ಕಾಲ ದೇವಸ್ಥಾನದ ಬಾಗಿಲು ತೆರೆಯಲಾಗುವುದು.

ಗಂಟೆಗೆ 500 ಭಕ್ತರಂತೆ ಒಟ್ಟು 7,000 ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಭಕ್ತಾದಿಗಳು ಆನ್​ಲೈನ್ ಮೂಲಕ ವಿಶೇಷ ಟಿಕೆಟ್ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ. ತಿರುಪತಿ ದೇವಾಲಯವಿರುವ ಚಿತ್ತೂರ್ ಜಿಲ್ಲೆಯೊಂದರಲ್ಲೇ 151 ಕರೊನಾ ಪ್ರಕರಣಗಳು ದೃಢವಾಗಿವೆ.