ಮೌನವೇ ಬಂಗಾರ: ಪ್ರಾಚೀನ ಜನರು ವೈದಿಕ ಕಾಲದಲ್ಲಿ ಸ್ಪಷ್ಟವಾಗಿ, ‘ವಾಚ್ಯಾರಂಭ ವಿಕಾರೊ ನಾಮಧ್ಯೇಯ’ ಮಾತನ್ನು ಆಡಿದರೆ, ಅದರ ವಿಕಾರವಾದಂತಾಯಿತು ಎಂದರು. ಮಾತನಾಡುವುದೆಂದರೆ ವಿಕೃತಿ. ಮಾತೆಂದರೆ ಸತ್ಯ ಎಂದು ತಪ್ಪಾಗಿ ತಿಳಿದುಕೊಂಡಿದ್ದೇವೆ. ಮಾತನ್ನು ಪದೇ ಪದೇ ಯಾವ ರೀತಿಯಲ್ಲಾದರೂ ತಿರುಚಬಹುದು ಮತ್ತು ಬೇರೆ ರೀತಿಯಾಗಿ ಅರ್ಥ ಮಾಡಿಕೊಳ್ಳಬಹುದು. ಭಾಷೆಯು ಸೀಮಿತವಾದದ್ದು. ಮೌನವೇ ಬಂಗಾರ. ಮೌನದ ಮೂಲಕ ನಾವು ಸಂರ್ಪಸಬಲ್ಲೆವು. ಮಾತುಗಳಿಲ್ಲದ ಸಂಪರ್ಕವು ಅತೀ ಶಕ್ತಿಶಾಲಿಯಾದದ್ದು ಮತ್ತು ಅತೀ ಉತ್ತಮವಾದದ್ದು. ಆದ್ದರಿಂದ, ಕಡಿಮೆಯಾಗಿ ಮಾತನಾಡುವುದು ದಿನನಿತ್ಯದ ಬಂಗಾರದ ನಿಯಮವಾಗಿರಬೇಕು. ಆದರೆ ಮಾತನಾಡದೆಯೇ ಇದ್ದುಬಿಡುವವರಿಗೆ ಕೊಡಲಾಗುವ ಸಂದೇಶವೆಂದರೆ - ‘ಮಾತನಾಡಿ!’.
ಜೀವನದ ಕಲೆ: ಮೂರು ಅಂಶಗಳಿವೆ - ಗ್ರಹಿಸುವುದು, ಗಮನಿಸುವುದು ಮತ್ತು ಅಭಿವ್ಯಕ್ತಿ. ಮೌನದಿಂದಾಗಿ ಈ ಮೂರು ವರ್ಧಿಸುತ್ತವೆ. ಇದೇ ಜೀವನದ ಕಲೆ. ವಿಷಯಗಳನ್ನು ನೀವು ಕಾಣುವ ರೀತಿಯ ಬೇರೆಯದಾಗಿರುತ್ತದೆ. ವಿಷಯಗಳನ್ನು ಮತ್ತಷ್ಟು ಸ್ಪಷ್ಟವಾಗಿ ಗಮನಿಸುತ್ತೀರಿ. ನಿಮ್ಮನ್ನು ಅಭಿವ್ಯಕ್ತಗೊಳಿಸಿಕೊಳ್ಳುವ ರೀತಿಯೂ ಬೇರೆಯದಾಗಿರುತ್ತದೆ. ಪದೇ ಪದೇ ಮೌನದೊಳಗೆ ಹೊಕ್ಕುತ್ತಿದ್ದಂತೆ ಈ ಮೂರೂ ಹೆಚ್ಚುತ್ತಲೇ ಹೋಗುತ್ತೇವೆ. ಸತ್ಯವೆಂದರೆ ಮಾತುಗಳಲ್ಲ. ಅದು ಅಸ್ತಿತ್ವದ ಸ್ಥಿತಿ.
ಇದಕ್ಕೊಂದು ಕಥೆ ಪೂರಕವಾಗಿದೆ. ಆ ಕಥೆಯನ್ನೊಮ್ಮೆ ಗಮನಿಸೋಣ. ಭಾರತದಲ್ಲೊಬ್ಬ ರಾಜನಿದ್ದ. ಆತನ ಹೆಸರು ಅಕ್ಬರ್. ಒಂದು ದಿನ ಅವನಿಗೊಂದು ಆಲೋಚನೆ ಹೊಳೆಯಿತು. ಆ ಮೂಲಕ ಆತನೊಬ್ಬ ನಿರ್ಧಾರಕ್ಕೆ ಬಂದ. ‘ನನ್ನ ರಾಜ್ಯದಲ್ಲಿ ಯಾರೇ ಸುಳ್ಳನ್ನು ಹೇಳಲಿ, ಅವರನ್ನು ಗಲ್ಲಿಗೇರಿಸುತ್ತೇನೆ’ ಎಂದು ಘೊಷಣೆ ಮಾಡಿದ. ಇದನ್ನು ಕೇಳಿದಾಗ ಇಡೀ ರಾಜ್ಯ ನಡುಗಿತು. ಮೊದಲನೆಯದಾಗಿ ಎಲ್ಲಾ ವರ್ತಕರೂ ಸೇರಿದರು. ಏಕೆಂದರೆ ಅವರು ‘ನಮ್ಮ ಸರಕೇ ಅತ್ಯುತ್ತಮವಾದದ್ದು’ಎಂಬ ಸುಳ್ಳನ್ನು ದಿನನಿತ್ಯ ಹೇಳುತ್ತಾರೆ. ಆದ್ದರಿಂದ ಅವರೆಲ್ಲ ಸೇರಿ ಈ ನಿಯಮವನ್ನು ತೆಗೆದುಹಾಕಬೇಕೆಂದುರ್ಚಚಿಸಿದರು. ವರ್ತಕರ ನಂತರ ವಕೀಲರೆಲ್ಲರೂ ಒಂದೆಡೆ ಸೇರಿದರು. ‘ಇದು ನಮ್ಮ ವೃತ್ತಿ! ಆದರೆ ಈತ ಏನು ಮಾಡುತ್ತಿದ್ದಾನೆ?. ಇದರಿಂದ ಎಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಈಗ’ ಎಂದರು. ನಂತರ ವೈದ್ಯರು ಸೇರಿದರು. ವೈದ್ಯರು ಯಾವಾಗಲೂ ಒಂದು ಅಂದಾಜು ಮಾಡಿಕೊಂಡು ಜನರಿಗೆ ಔಷಧಿಯನ್ನು ಕೊಡುತ್ತಾರೆ. ಒಂದು ವೇಳೆ ರೋಗಿಗಳು ಗುಣಮುಖರಾಗದಿದ್ದರೆ ಅವರೂ ಗಲ್ಲಿಗೆ ಹೋಗಬೇಕಾಗುತ್ತದೆ ಎಂದು ರ್ಚಚಿಸಿದರು. ಇವರೆಲ್ಲರ ನಂತರ ಆ ರಾಜ್ಯದ ಎಲ್ಲ ಜ್ಯೋತಿಷಿಗಳು ಒಂದು ಕಡೆ ಸೇರಿ ವಿಚಾರ ವಿನಿಮಯ ನಡೆಸಿದರು.
ಕೊನೆಗೆ ಎಲ್ಲರೂ ಬೀರಬಲ್ಲನ ಬಳಿಗೆ ಹೋಗಿ ಒಂದು ದಾರಿಯನ್ನು ಕಂಡು ಹಿಡಿ ಎಂದರು. ಬೀರಬಲ್ಲನು ರಾಜನ ಕೋಣೆಗೆ ನುಗ್ಗಿದನು. ರಾಜಭಟರು ಅವನನ್ನು ತಡೆದರು. ‘ನನ್ನನ್ನು ತಡೆಯಬೇಡಿ. ನನ್ನನ್ನು ಗಲ್ಲಿಗೇರಿಸಲಾಗುತ್ತದೆ. ಅದರಿಂದ ಹೋಗುತ್ತಿದ್ದೇನೆ’ ಎಂದನು ಬೀರಬಲ್. ಎಲ್ಲರಿಂದಲೂ ಸನ್ಮಾನಿತನಾದ ತನ್ನ ಮಂತ್ರಿಯಾದ ಬೀರಬಲ್ಲನೇ ಸುಳ್ಳು ಹೇಳುತ್ತಿದ್ದಾನೆಂಬ ಸಂಗತಿ ರಾಜನ ಕಿವಿಗೆ ಬಿದ್ದಿತು. ಬೀರಬಲ್ಲನು ಸುಳ್ಳು ಹೇಳಿದ್ದರಿಂದ ಹೊಸ ಕಾನೂನನ್ನು ಪಾಲಿಸಬೇಕಾಯಿತು. ಆದರೆ ಕಾನೂನನ್ನು ಜಾರಿಗೆ ತಂದರೆ ಬೀರಬಲ್ಲನು ಹೇಳಿದ್ದು ನಿಜವಾದಂತಾಯಿತು. ರಾಜನುಸಂದಿಗ್ಧ ಸ್ಥಿತಿಗೆ ಸಿಲುಕಿಕೊಂಡು, ಅದನ್ನು ನಿವಾರಿಸಲುಸಭೆಯನ್ನು ಕರೆದನು. ಅವನನ್ನು ಗಲ್ಲಿಗೇರಿಸದಿದ್ದರೆ ಕಾನೂನು ಗೌಣವಾಗುತ್ತದೆ. ಗಲ್ಲಿಗೇರಿಸಿದರೆ ಆತನು ಹೇಳಿದ್ದುನಿಜವಾಗುತ್ತದೆ. ಈಗೇನು ಮಾಡುವುದು? ನಿರಪರಾಧಿಯನ್ನು ಗಲ್ಲಿಗೇರಿಸುವಂತಿಲ್ಲ.
ಸತ್ ಚಿತ್ ಆನಂದ: ಆಗ ಎಲ್ಲರೂ ರಾಜನಿಗೆ ಒಂದು ಸಂಗತಿಯನ್ನು ಅರುಹಿದರು. ‘ಸತ್ಯ ಎಂದರೆ ನುಡಿಯುವ ಮಾತುಗಳಲ್ಲ. ನಾವೇನು ಆಗಿದ್ದೇವೊ ಅದೇ ಸತ್ಯ’ ಎಂದು ರಾಜನಿಗೆ ಮನವರಿಕೆ ಮಾಡಿಕೊಟ್ಟರು. ಸತ್ ಚಿತ್ ಆನಂದ - ಇದೇ ನಿಮ್ಮ ನಿಜ ಸ್ವರೂಪ, ಅಸ್ತಿತ್ವ. ಅದೇ ನೀವು.