ಬೆಂಗಳೂರು ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಸಮಿತಿಯು ಮುಂಬರುವ 2024-25ನೇ ಸಾಲಿನ ಉನ್ನತ ಶಿಕ್ಷಣದ ಪಠ್ಯಕ್ರಮ ಚೌಕಟ್ಟು ಸಿದ್ಧಪಡಿಸಲು ಮುಂದಾಗಿದೆ.
ಸಮಿತಿಯು ಈಗಾಗಲೇ 3 ವರ್ಷದ ಪದವಿಗೆ ಶಿಾರಸು ಮಾಡಿದೆ. ಮುಂದಿನ 6 ತಿಂಗಳಲ್ಲಿ 2024-25ನೇ ಪದವಿ ಶೈಕ್ಷಣಿಕ ಸಾಲು ಆರಂಭವಾಗಲಿರುವ ಕಾರಣ ಅಷ್ಟರೊಳಗೆ ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯಕ್ರಮ ರಚನೆ ಮಾಡುವ ಜವಾಬ್ದಾರಿ ಸಮಿತಿ ಸರ್ಕಾರದ ಮೇಲಿದೆ. ಪಠ್ಯಕ್ರಮ ಚೌಕಟ್ಟು ರಚನೆ ಕಾರ್ಯ ತುರ್ತಾಗಿ ಮಾಡಬೇಕಿರುವ ಕಾರಣ ೆ.9 ಮತ್ತು 10ರಂದು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳೊಂದಿಗೆ ಚರ್ಚಿಸಲು ಸಭೆ ನಿಗದಿ ಮಾಡಿದೆ.
ಕಡ್ಡಾಯವಾಗಿ 2024-25ನೇ ಸಾಲಿನ ಪಠ್ಯಕ್ರಮ ಚೌಕಟ್ಟು ರಚನೆ ಮಾಡಿಕೊಡುವಂತೆ ರಾಜ್ಯ ಸರ್ಕಾರವು ಸಮಿತಿಗೆ ಸೂಚನೆ ನೀಡಿದೆ. ಈ ಸಂಬಂಧ ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಇಂಜಿನಿಯರಿಂಗ್ ಸೇರಿ ಇತರೆ ವಿಷಯಗಳನ್ನು ಬೋಧನೆ ಮಾಡುವ ರಾಜ್ಯದ ವಿಶ್ವವಿದ್ಯಾಲಯಗಳ ಬೋಧನಾ ಮಂಡಳಿಗಳು ಅಧ್ಯಕ್ಷರೊಂದಿಗೆ ಸಂವಾದ ನಡೆಸಲಿವೆ.
ಈ ಸಂವಾದದ ಸಮಯದಲ್ಲಿ ಭಾಗವಹಿಸುವವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ವಿಭಾಗಗಳ ವಿಶೇಷತೆ, ಕೋರ್ (ಪ್ರಮುಖ ಮತ್ತು ಸಣ್ಣ) ಮತ್ತು ಸಾಮಾನ್ಯ ಕೋರ್ಸ್‌ಗಳ ವಿತರಣೆ, ಕೋರ್ಸ್ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಎಷ್ಟು ಆಯ್ಕೆ ನೀಡಬೇಕು (ಓಪನ್ ಎಲೆಕ್ಟಿವ್) ನೀಡಬೇಕು ಎಂಬ ವಿಷಯಗಳ ಚರ್ಚೆ ನಡೆಯಲಿದೆ.
ೆ.9 ಮತ್ತು 10ರಂದು ರಾಜ್ಯ ಉನ್ನತ ಶಿಕ್ಷನ ಪರಿಷತ್ತಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಆಯಾ ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ವಿಭಾಗ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ.
3 ವರ್ಷದ ಪದವಿಗೆ ಓಪನ್ ಎಲೆಕ್ಟಿವ್ ಬೇಕಾ ಅಥವಾ ಈ ಹಿಂದೆ ಇದ್ದ ಮಾದರಿಯಲ್ಲಿಯೇ 3 ಐಚ್ಛಿಕ ವಿಷಯಗಳನ್ನು ನೀಡುವುದು, ಅಥವಾ ಹೊಸ ಮಾದರಿ ಅಳವಡಿಸಿಕೊಳ್ಳಬಹುದಾ ಎಂಬುದರ ಬಗ್ಗೆ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.