Crime : ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಾರೆ ಎಂದು ನೀವು ಕೇಳಿರುತ್ತೀರಿ ಇದೇನು ಆಶ್ಚರ್ಯವೇನಲ್ಲ. ಇಂದಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವಂತ ಸಾಮಾನ್ಯ ವಿಚಾರ ಇದಾಗಿದೆ. ಅಂದರೆ ಸಾಂಆನ್ಯವಾಗಿ, ದಿನಸಿ ಸಾಮಾನು ಕಳ್ಳತನ ಮಾಡುವುದು ಇಲ್ಲವೇ, ಚಾರ್ಜರ್ಗಳು, ಇನ್ನಿತರ ಆಟಿಕೆಗಳನ್ನು ಸುಲಭವಾಗಿ ವಿವೇಚನೆಯಿಂದ ಅಂಗಡಿಯಲ್ಲಿ ಕಳ್ಳತನ ಮಾಡುತ್ತಾರೆ. ಆದರೆ, ಆಸ್ಟ್ರೇಲಿಯಾದ ಮೈಯಲ್ಲಾ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಟೀ ಶರ್ಟ್ ಒಳಗೆ ದೊಡ್ಡ ಟಿವಿಯೊಂದನ್ನು ತುಂಬಿಕೊಳ್ಳುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ಂತೆಯೇ, ನೆಟ್ಟಿಗರು ಆಶ್ಚರ್ಯ ಸೂಚಿಸಿದ್ದಾರೆ.
ಆಸ್ಟ್ರೇಲಿಯಾದ ಮೈಯಲ್ಲಾದಲ್ಲಿರುವ ಒಬ್ಬ ವ್ಯಕ್ತಿ ಎಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ನಡೆದುಕೊಂಡು ಹೋಗುವುದನ್ನು ಈ ಸಿಸಿಟಿವಿ ದೃಶ್ಯ ತೋರಿಸುತ್ತಿದೆ. ನಂತರ ಅವನು ಇದ್ದಕ್ಕಿಂದತೆಯೇ, ತನ್ನ ಟೀ ಶರ್ಟ್ನಲ್ಲಿ ಟಿವಿಯೊಂದನ್ನು ತುಂಬಲು ಪ್ರಾರಂಭಿಸುತ್ತಾನೆ. ಆದರೆ, ಇಲ್ಲಿ ಪೂರ್ತಿಯಅಗಿ ಮರೆಮಾಡಲು ಸಾಧ್ಯವಾಗುವುದಿಲ್ಲ. ಇದಾದ ನಂತರ, ಅಂಗಡಿಯರ ಕಣ್ಣಿಗೆ ಈ ದೃಶ್ಯ ಬೀಳದಂತೆ ತನ್ನನ್ನು ರಕ್ಷಿಸಿಕೊಂಡು ಅಂಗಡಿಯಿಂದ ಹೊರಹೋಗುತ್ತೇನೆ.
ಈ ಘಟನೆಯನ್ನು @7newsadelaide ಎಂಬ ಇನ್ಸ್ಟಾಗ್ರಾಮ್ ಖಾತೆದಾರರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈಯಲ್ಲಾ ಎಲೆಕ್ಟ್ರಾನಿಕ್ ಅಂಗಡಿಯಿಂದ ಕಳ್ಳನೊಬ್ಬ ನಾಚಿಕೆಯಿಲ್ಲದೇ, ಬೆಲೆಬಾಳುವ ವಸ್ತುವೊಂದನ್ನು ತನ್ನ ಶರ್ಟ್ನಲ್ಲಿ ತುಂಬಿಕೊಳ್ಳುತತಿರುವುದನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹಿಂದೂಗಳ ಜಾತಿಯಲ್ಲಿ ಕ್ರಿಶ್ಚಿಯನ್ ಪದ ಸೇರ್ಪಡೆ ಖಂಡಿಸಿ ಸೆ. 18 ರಂದು ಪ್ರತಿಭಟನೆ: ಅಭಿನವ ಕೋಟ್ಟೂರೇಶ್ವರ ಶ್ರೀಗಳು
ಈ ವಿಡಿಯೋಗೆ ನೆಟಿಜನ್‌ಗಳು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು ವಾವ್, ಈತ ತುಂಬಾ ಬುದ್ಧಿವಂತ! ಅವರು ಒಬ್ಬ ಒಳ್ಳೆಯ ಪ್ರತಿಭೆ ಎಂದು ಕಾಮೆಂಟ್ ಮಾಡಿದ್ದಾರೆ. ಒಬ್ಬರು ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆ ಬಂತು ಎಂದು ಕಾಮೆಂಟ್ ಮಾಡಿದ್ದಾರೆ.
(ಏಜೆನ್ಸೀಸ್)