ನ್ಯೂಸ್

ಬೋಧನಾ ವ್ಯವಸ್ಥೆಯೇ ನಾರಾಯಣ ಯಶಸ್ಸು; ದೇಶಾದ್ಯಂತ 23 ರಾಜ್ಯಗಳಲ್ಲಿ ಸೇವೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಶಾಲಾ- ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವ ಜತೆಗೆ ವೈದ್ಯಕೀಯ, ತಾಂತ್ರಿಕ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳಾದ ನೀಟ್, ಜೆಇಇ ಪರೀಕ್ಷೆಗಳಲ್ಲಿಯೂ ನಾರಾಯಣ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅಸಾಧಾರಣ ಸಾಧನೆ ಮಾಡುತ್ತಿದ್ದಾರೆ. ಈ ಮೂಲಕ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿ ನಾರಾಯಣ ಗ್ರೂಪ್ ಆಫ್ ಎಜುಕೇಷನ್ ಗುರುತಿಸಿಕೊಂಡಿದೆ.

ತನ್ನಲ್ಲಿನ ಆಳವಾದ ಪಠ್ಯಕ್ರಮ, ಬೋಧನಾ ಕ್ರಮ, ಪ್ರತಿಭಾವಂತ ಶಿಕ್ಷಕರ ತಂಡ, ಮೌಲ್ಯಮಾಪನ ಮತ್ತು ಪರೀಕ್ಷಾ ವ್ಯವಸ್ಥೆ ಸೇರಿ ಸಂಸ್ಥೆಯ ಯಶಸ್ಸಿನ ಗುಟ್ಟು ಕುರಿತು ನಾರಾಯಣ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪುನೀತ್ ಕೊತಪ ‘ವಿಜಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

ನಾಲ್ಕೂವರೆ ದಶಕದ ನಂಬಿಕೆ: ಗಣಿತ ಶಿಕ್ಷಕರಾಗಿದ್ದ ಪೊಂಗುರು ನಾರಾಯಣ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1979ರಲ್ಲಿ ಸಣ್ಣ ಕೊಠಡಿಯೊಂದರಲ್ಲಿ ಸಂಸ್ಥೆಯನ್ನು ಆರಂಭಿಸಿದರು. ನಂತರ ಹಂತ ಹಂತವಾಗಿ ಬೆಳೆದದ್ದು ಇತಿಹಾಸ. ಇಂದು ದೇಶದ 23 ರಾಜ್ಯಗಳಲ್ಲಿ 800 ಶಾಖೆಗಳನ್ನು ಹೊಂದಿದ್ದು, 50 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 6 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 50 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬೆಂಗಳೂರು, ಮೈಸೂರು, ಬಳ್ಳಾರಿ ಸೇರಿ ಹಲವು ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದುವ ಮೂಲಕ ತನ್ನದೇ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಿಕೊಂಡಿದೆ.

ದೇಶಾದ್ಯಂತ ಒಂದೇ ಮಾದರಿ ಗುಣಮಟ್ಟ

ಭಾರತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಉದ್ದೇಶದಿಂದ ಪಾಲಕರು ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಾರೆ. ಮಕ್ಕಳನ್ನು ಶಿಕ್ಷಣ ಸಂಸ್ಥೆಗಳಿಗೆ ದಾಖಲಿಸಿದ ಬಳಿಕ ಅವರ ನಿರೀಕ್ಷೆಗೆ ತಕ್ಕಂತೆ ಮಕ್ಕಳಿಗೆ ಕಲಿಸುವುದು ನಮ್ಮ ಕರ್ತವ್ಯವಾಗಿದೆ. ಪಠ್ಯಕ್ರಮ ಮತ್ತು ಬೋಧನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಪಾಲಕರ ನಂಬಿಕೆಯನ್ನು ಉಳಿಸಿಕೊಳ್ಳಲಾಗಿದೆ. ಹೈದರಾಬಾದ್, ಬೆಂಗಳೂರು ಮತ್ತು ಗುಡಗಾಂವ್ ಸೇರಿ ದೇಶಾದ್ಯಂತ ಒಂದೇ ಗುಣಮಟ್ಟ ನೀಡುತ್ತಿರುವುದೇ ಯಶಸ್ಸನ್ನು ಉಳಿಸಿಕೊಳ್ಳಲು ಕಾರಣವಾಗಿದೆ.

ಎಐ ಡೌಟ್ ಸಲ್ಯೂಷನ್ ವ್ಯವಸ್ಥೆ

ಆಧುನಿಕ ಶಿಕ್ಷಣದಲ್ಲಿ ಮುಂದುವರಿದ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ) ಮತ್ತು ಇತರ ಡಿಜಿಟಲ್ ಶಿಕ್ಷಣ ಕೂಡ ಮುಖ್ಯ ಪಾತ್ರವಹಿಸುತ್ತಿದೆ. ವಿದ್ಯಾರ್ಥಿಗಳ ಗೊಂದಲ, ಅನುಮಾನಗಳನ್ನು ಕ್ಷಣ ಮಾತ್ರದಲ್ಲಿ ಬಗೆಹರಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವಾದ ಜಾಟ್ ಜಿಪಿಟಿಯನ್ನು ಅಳವಡಿಸಿಕೊಳ್ಳಲಾಗಿದೆ. ಡಿಜಿಟಲ್ ಪ್ಲಾಟ್​ಫಾಮ್ರ್ ವ್ಯವಸ್ಥೆಯಿಂದ ಪ್ರತಿ ದಿನ 4 ಸಾವಿರ ವಿದ್ಯಾರ್ಥಿಗಳು ತಮ್ಮ ಗೊಂದಲವನ್ನು ತಂತ್ರಜ್ಞಾನದ ಮೂಲಕವೇ ಬಗೆಹರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಸಂಸ್ಥೆಯ 200 ಮಂದಿ ಆರ್ ಆಂಡ್ ಡಿ ಸೆಂಟರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಾರಾಂತ್ಯದಲ್ಲಿ ಶಿಕ್ಷಕರಿಗೆ ತರಬೇತಿ

ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಗುಣಮಟ್ಟದ ಶಿಕ್ಷಕರ ತಂಡದ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ, ಶಿಕ್ಷಕರಿಗೆ ಪ್ರತಿ ವಾರ ಪಠ್ಯ ಬೋಧನೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ವಾರಾಂತ್ಯದಲ್ಲಿ ತರಬೇತಿ ಮತ್ತು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಈ ಮೂಲಕ ಬೆಸ್ಟ್ ಪ್ರಾಕ್ಟೀಸ್ ಅನ್ನು ಇತರ ಶಿಕ್ಷಕರು ಅನುಸರಿಸುತ್ತಾರೆ. ಇದರಿಂದ ಶಿಕ್ಷಕರ ಬೋಧನಾ ಮಟ್ಟ ಉನ್ನತೀಕರಿಸಲಾಗುತ್ತದೆ.

ಐಐಟಿಗೆ 2 ಸಾವಿರ, ನೀಟ್​ಗೆ 500 ಮಂದಿ ಪ್ರವೇಶ

ಪ್ರತಿ ವರ್ಷ ಸಂಸ್ಥೆಯಿಂದ ಕನಿಷ್ಠ 2 ಸಾವಿರ ವಿದ್ಯಾರ್ಥಿಗಳು ಐಐಟಿಯಲ್ಲಿ ಹಾಗೂ 500 ಮಂದಿ ನೀಟ್​ನಲ್ಲಿ ಅರ್ಹತೆ ಪಡೆಯುತ್ತಿದ್ದಾರೆ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ತನ್ನದೇ ಪರಂಪರೆ ಮುಂದುವರಿಸಿಕೊಂಡು ಬರುತ್ತಿದೆ. ವೃತ್ತಿ ಶಿಕ್ಷಣ ಹೊರತಾಗಿ ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ನಮ್ಮ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಮುಂದಿದ್ದಾರೆ. ಪರೀಕ್ಷಾ ವ್ಯವಸ್ಥೆ, ಬೇರೆ ಸಂಸ್ಥೆಗಳಿಗಿಂತ ವಿಶೇಷವಾದ ಶೈಕ್ಷಣಿಕ ಪಠ್ಯಕ್ರಮ ಹೊಂದಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ಸಿದ್ಧತೆ

ನಾರಾಯಣ ಸಂಸ್ಥೆಯು ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಲಿಗೆ ವಿಶೇಷವಾಗಿ ತಯಾರಿ ನಡೆಸುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಪರೀಕ್ಷೆಗಳಲ್ಲಿ ಶ್ರೇಷ್ಠ ಮತ್ತು ಅತ್ಯುತ್ತಮ ದರ್ಜೆಯಲ್ಲಿ ರ್ಯಾಂಕ್ ವಿದ್ಯಾರ್ಥಿಗಳಾಗಿ ಹೊರಹೊಮ್ಮಲು ಸಮಗ್ರ ರೀತಿಯಲ್ಲಿ ಸಿದ್ಧತೆಯನ್ನು ನಡೆಸಲಾಗುತ್ತದೆ. ದೇಶಾದ್ಯಂತ ಒಂದೇ ರೀತಿಯಲ್ಲಿ ಸಿದ್ಧತೆ ನಡೆಸುವುದು ನಮ್ಮ ಸಂಸ್ಥೆಯ ವಿಶೇಷಗಳಲ್ಲಿ ಒಂದಾಗಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಶೇಷವಾಗಿದೆ ಎನ್ನುತ್ತಾರೆ ನಾರಾಯಣ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪುನೀತ್ ಕೊತಪ.

15 ದಿನಗಳಿಗೊಮ್ಮೆ ರಾಷ್ಟ್ರಮಟ್ಟದ ಟೆಸ್ಟ್ :

ಸಂಸ್ಥೆಯು ತನ್ನ ಪರಂಪರೆಯನ್ನು ಉಳಿಸಿಕೊಂಡಿರುವುದು ಮಾತ್ರವಲ್ಲ. ಪಾಲಕರು ಮತ್ತು ವಿದ್ಯಾರ್ಥಿಗಳ ನಂಬಿಕೆಗೆ ಅರ್ಹವಾಗಿ ಭವಿಷ್ಯದಲ್ಲಿಯೂ ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಲು ಶಿಕ್ಷಣ ಕ್ಷೇತ್ರದಲ್ಲಿ ನಾವೀನ್ಯತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪಠ್ಯಕ್ರಮಗಳ ವರ್ಧನೆಯಲ್ಲಿಯೂ ಸದಾ ಮುಂದಿರಲಿದೆ. ವಿದ್ಯಾರ್ಥಿಗಳ ಕಲಿಕೆಯನ್ನು ಪರಿಶೀಲಿಸಲು ಎರಡು ವಾರಕ್ಕೊಮ್ಮೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಐಐಟಿ, ನೀಟ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯಲು ಅನುಕೂಲವಾಗುವಂತೆ ಸಂಸ್ಥೆಯಲ್ಲಿ ನಿರಂತರವಾಗಿ ಅಭ್ಯಾಸ ಮಾಡಿಸಲಾಗುತ್ತಿದೆ. ಪರೀಕ್ಷೆಗೂ 2 ತಿಂಗಳು ಮೊದಲೇ ಪಠ್ಯಕ್ರಮ ಪೂರ್ಣಗೊಳಿಸಿ ಪುನರಾವರ್ತನೆ ಮಾಡಿಸಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆಯುತ್ತಿದ್ದಾರೆ.

ಜನರ ಗುರಿ ತಲುಪಿಸುತ್ತೇವೆಂಬ ನಂಬಿಕೆ : ದೇಶದಲ್ಲಿನ ಮಧ್ಯಮ ವರ್ಗದ ಜನರು ಸಾಕಷ್ಟು ಜೀವನದಲ್ಲಿ ಸಾಕಷ್ಟು ನಿರೀಕ್ಷೆ, ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಅಂತಹ ಆಕಾಂಕ್ಷೆಗಳ ಗುರಿ ಮುಟ್ಟ ಬೇಕಾದರೆ ಪ್ರಾಥಮಿಕವಾಗಿ ಗುಣಾತ್ಮಕ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣದ ಜತೆಗೆ ನಾಯಕತ್ವ ಗುಣ, ಪ್ರಾಮಾಣಿಕತೆ, ನೈತಿಕತೆ, ಮಾನವೀಯತೆ, ಪ್ರಶ್ನಿಸುವ ಮನೋಭಾವ, ತಂತ್ರಜ್ಞಾನ ಅಳವಡಿಕೆ, ಜಾಗತಿಕ ವಿದ್ಯಮಾನಗಳು ಸೇರಿ ಪ್ರಸ್ತುತತೆಗೆ ಬೇಕಾದ ಎಲ್ಲ ಆಯಾಮಗಳಲ್ಲಿ ನಾರಾಯಣ ಶಿಕ್ಷಣ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲಾ ಆಯಾಮಗಳಲ್ಲಿ ಮಕ್ಕಳು ಕೌಶಲ ಬೆಳೆಸಿಕೊಂಡಾಗ ತಾವು ಅಂದುಕೊಂಡಿದ್ದನ್ನು ಸಾಧಿಸುವ ಮಾರ್ಗ ಸುಲಭವಾಗುತ್ತದೆ. ಮಧ್ಯಮ ವರ್ಗದ ಜನರ ಆಕಾಂಕ್ಷೆಗಳನ್ನು ಸರಿಯಾದ ರೀತಿಯಲ್ಲಿ ಗುರಿ ತಲುಪಿಸುವ ಹೊಣೆಗಾರಿಕೆಯನ್ನು ಸಂಸ್ಥೆಯ ಹೊತ್ತಿದೆ. ಇದಕ್ಕಾಗಿಯೇ ಪಾಲಕರು ನಮ್ಮ ಸಂಸ್ಥೆಗೆ ಮೊದಲ ಆದ್ಯತೆ ನೀಡುತ್ತಾರೆ.

ಮುಂದಿನ ವರ್ಷ ಜಮ್ಮು ಕಾಶ್ಮೀರದಲ್ಲಿ ಆರಂಭ

ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ನಾರಾಯಣ ಸಂಸ್ಥೆ 230 ನಗರದಲ್ಲಿ ಸೇವೆ ಸಲ್ಲಿಸುತ್ತಿದೆ. 2025-26ನೇ ಸಾಲಿನಿಂದ ಜಮ್ಮು- ಕಾಶ್ಮೀರದಲ್ಲಿಯೂ ತನ್ನ ಸೇವೆ ಆರಂಭಿಸುತ್ತಿದೆ.

ಪರಿಣಾಮಕಾರಿ ಮೌಲ್ಯಮಾಪನ : ನಾರಾಯಣ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷದ ಆರಂಭದಿಂದಲೇ ಪರಿಣಾಮಕಾರಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ನಿಯಮವು ವಿದ್ಯಾರ್ಥಿಗಳನ್ನು ಶಾಲೆಯ ಮೊದಲ ದಿನದಿಂದಲೇ ಪರೀಕ್ಷೆಯ ಮನಭಾವ ಬರುವಂತೆ ಮಾಡುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ. ಮುಖ್ಯ ಪರೀಕ್ಷೆ ಕೂಡ ಲೀಲಾಜಾಲವಾಗಿ ಎದುರಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಲಾಗುತ್ತದೆ. ಗುಣಮಟ್ಟದ, ಪರಿಣಾಮಕಾರಿ ಮೌಲ್ಯಮಾಪನ ವ್ಯವಸ್ಥೆಯು ಮಕ್ಕಳಲ್ಲಿನ ಸಾಮರ್ಥ್ಯ ಹೆಚ್ಚುಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕ್ಲಾಸ್​ರೂಂನಲ್ಲಿಯೇ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.

ದೇಶದ ಮಧ್ಯಮ ವರ್ಗದ ಜನತೆ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಬೇಕೆಂಬ ಬಯಕೆ ಹಾಗೂ ಅಗಾಧವಾದ ಆಕಾಂಕ್ಷೆ ಹೊಂದಿರುತ್ತಾರೆ. ಇದನ್ನು ಸಾಕಾರಗೊಳಿಸಲು ಗುಣಮಟ್ಟದ ಶಿಕ್ಷಣ ಬೇಕಾಗುತ್ತದೆ. ಅಂತಹ ಗುಣಾತ್ಮಕ ಶಿಕ್ಷಣ ನೀಡಲು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿರುವುದೇ ನಮ್ಮ ಯಶಸ್ಸಿನ ಗುಟ್ಟಾಗಿದೆ. | ಪುನೀತ್ ಕೊತಪ ನಾರಾಯಣ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ