ನ್ಯೂಸ್

ಕೊರೊನಾ ವೈರಸ್​ ಭೀತಿ; ಮಾಸ್ಕ್​ಗಳ ರಕ್ಷಣೆಯೇ ಕಷ್ಟವಾಗುತ್ತಿದೆ...ಆಸ್ಪತ್ರೆಯಿಂದ ಕಳವಾದವು ಬರೋಬ್ಬರಿ 2000 ಸರ್ಜಿಕಲ್​ ಮಾಸ್ಕ್​ಗಳು..

ಫ್ರಾನ್ಸ್​: ಕೊರೊನಾ ವೈರಸ್​ ಭೀತಿ ಇಡೀ ಜಗತ್ತಿಗೇ ಆವರಿಸಿದೆ. ಈ ಕಾರಣದಿಂದ ಮಾಸ್ಕ್​ ಎಂಬುದು ಬಹುದೊಡ್ಡ ಅಗತ್ಯವಾಗಿ ಪರಿಣಮಿಸಿದೆ.

ಸದ್ಯದ ಮಟ್ಟಿಗೆ ಪ್ರತಿಯೊಬ್ಬರ ಬೇಡಿಕೆಯಾದ ಮಾಸ್ಕ್​ ಕೂಡ ಕಳವಾಗುತ್ತಿದೆ. ಈಗ ದಕ್ಷಿಣ ಫ್ರೆಂಚ್​​ನ ಮಾರ್ಸಿಲ್ಲೆ ನಗರದ ಆಸ್ಪತ್ರೆಯೊಂದರಿಂದ ಬರೋಬ್ಬರಿ 2000 ಸರ್ಜಿಕಲ್​ ಮಾಸ್ಕ್​ಗಳು ಕಳುವಾಗಿದ್ದಾಗಿ ವರದಿಯಾಗಿದೆ. ಇವೆಲ್ಲ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಳಸುವ ಮಾಸ್ಕ್​ಗಳಾಗಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಮತ್ತು ಅಲ್ಲಿನ ವೈದ್ಯರ ಬಳಕೆಗಾಗಿ ಇಡಲಾಗಿತ್ತು.

ಸರ್ಜಿಕಲ್​ ಮಾಸ್ಕ್​ಗಳು ಕಳವಾದ ಬೆನ್ನಲ್ಲೇ ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಫೇಸ್​ ಮಾಸ್ಕ್​ಗಳ ಉತ್ಪಾದನೆ ಹಾಗೂ ಸಂಗ್ರಹ ಹೆಚ್ಚಾಗಬೇಕು ಎಂದು ಆರೋಗ್ಯ ಇಲಾಖೆ, ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಮಾಸ್ಕ್​ಗಳ ಕೊರತೆ ಆದರೆ ಹೀಗೆ ಕಳವಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದಾಗಿ ನಿಜಕ್ಕೂ ಅಗತ್ಯ ಇರುವವರಿಗೆ ಪೂರೈಕೆ ಆಗುವುದಿಲ್ಲ ಎಂದಿದ್ದಾರೆ.

ಫ್ರಾನ್ಸ್​ನಲ್ಲಿ ಕೊರೊನಾ ವೈರಸ್​ನಿಂದ ನಾಲ್ವರು ಮೃತಪಟ್ಟಿದ್ದು, ಒಟ್ಟು 204 ಜನರಲ್ಲಿ ಸೋಂಕು ದೃಢಪಟ್ಟಿದೆ. (ಏಜೆನ್ಸೀಸ್​)