ನ್ಯೂಸ್

ಬಿಟ್ಟು ಹೋದ ಪತ್ನಿ ಮೇಲಿನ ಸಿಟ್ಟಿಗೆ ಅತ್ತೆಯ ಮೂಗು ಕಚ್ಚಿದ ಅಳಿಯ

ಮಧ್ಯಪ್ರದೇಶ: ಪತ್ನಿ ದೂರವಾದ ಸಿಟ್ಟಿಗೆ ಅಳಿಯನೋರ್ವ ಅತ್ತೆಯ ಮೂಗು ಕತ್ತರಿಸಿದ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ಈ ಘಟನೆ ನಡೆದಿದೆ.

ರಾಜು ಬಘೇಲ್ ಅತ್ತೆಯ ಮೂಗು ಕತ್ತರಿಸಿದ ಅಳಿಯ. ಈ ರಾಜು ಬಘೇಲ್ ಪ್ರತಿನಿತ್ಯ ತನ್ನ ಹೆಂಡತಿ ಶ್ಯಾಮ್ ಸುಂದರಿ ಯನ್ನು ಥಳಿಸುತ್ತಿದ್ದ. ಗಂಡನ ಕಿರುಕುಳದಿಂದ ಬೇಸತ್ತ ಆಕೆ ತವರು ಮನೆ ಸೇರಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ರಾಜು ಬಘೇಲ್ ಜಗಳ ಮಾಡಲು ಶುರು ಮಾಡಿದ್ದಾನೆ.

ಅತ್ತೆ ರಾಮ್ ವಿಲಾಸಿ ವಿರೋಧ ವ್ಯಕ್ತಪಡಿಸಿದಾಗ ಅಳಿಯ ರಾಜು ಬಘೇಲ್ ಆಕೆಯ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಅಲ್ಲದೇ ಮಾವ ರಾಮ್‌ಹಿತ್ ಬಘೇಲ್ ಅವರನ್ನು ಥಳಿಸಿದ್ದಾನೆ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತೆಯ ಕಚ್ಚಿ ಗಾಯಗೊಳಿಸಿದ ಅಳಿಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೇ ಹೀಗೆ ಅತ್ತೆಯನ್ನು ಕಚ್ಚಿ ಗಾಯಗೊಳಿಸಿದ ಅಳಿಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.