accident: ಪಶ್ಚಿಮ ಆಫ್ರಿಕಾದ ಕರಾವಳಿಯಲ್ಲಿ ಅಂದಾಜು 150 ವಲಸಿಗರನ್ನು ಕೊಂಡ್ಯುಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಈವರೆಗೂ 70 ಜನರು ಸಾವನ್ನಪ್ಪಿದ್ದಾರೆ ಎಂದು ಗ್ಯಾಂಬಿಯಾದ ವಿದೇಶಾಂಗ ಸಚಿವಾಲಯ ಶುಕ್ರವಾರ (ಆಗಸ್ಟ್ 29) ಅಧಿಕೃತವಾಗಿ ಘೋಷಿಸಿದೆ.
ಗ್ಯಾಂಬಿಯಾದಿಂದ ಹೊರಟಿದ್ದ ಈ ದೋಣಿಯು ಸೆನೆಗಲ್ ಹಾಗೂ ಗ್ಯಾಂಬಿಯನ್ ಪ್ರಜೆಗಳನ್ನು ಹೊತ್ತೊಯ್ಯತ್ತಿತ್ತು ಎನ್ನಲಾಗಿದೆ. ಹಡಗು ಮಾರಿಟಾನಿಯ ಕರಾವಳಿಯಲ್ಲಿ ಬುಧವಾರ ಮುಳಗಿದ ನಂತರ ಅಂದಾಜು 30 ಜನಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ಇದನ್ನೂ ಓದಿ: ಪೋರ್ನ್ ವೆಬ್ಸೈಟ್ನಲ್ಲಿ ಇಟಲಿ ಪ್ರಧಾನಿ, ವಿಪಕ್ಷ ನಾಯಕಿಯ ನಕಲಿ ಫೋಟೋ; ಪಿಎಂ ಮೆಲೋನಿ ಆಕ್ರೋಶ| Giorgia Meloni
ಈ ಹಡಗು ಅಂದಾಜು 150 ಜನರನ್ನು ಹೊತ್ತೊಯ್ಯುತ್ತಿದ್ದು, ಅವರಲ್ಲಿ 16 ಜನರನ್ನು ರಕ್ಷಿಸಲಾಗಿದೆ. ಹಾಗೇ ಮಾರಿಷನ್ ಅಧಿಕಾರಿಗಳು ಈವರೆಗೂ 70 ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಅಪಘಾತವು ಇತ್ತೀಚಿನ ವರ್ಷಗಳಲ್ಲಿ ಯುರೋಪ್‌ಗೆ ವಲಸೆ ಹೋಗುವ ಈ ಮಾರ್ಗದಲ್ಲಿ ಸಂಭವಿಸಿದ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ ಎಂದು ಸುದ್ದಿಯಾಗಿದೆ.
ಅದಾಗ್ಯೂ, ಪಶ್ಚಿಮ ಆಫ್ರಿಕಾದ ಕರಾವಳಿಯಿಂದ ಕ್ಯಾನರಿ ದ್ವೀಪಗಳಿಗೆ ಹೋಗುವ ಅಟ್ಲಾಂಟಿಕ್ ವಲಸೆ ಮಾರ್ಗವನ್ನು ಸಾಮಾನ್ಯವಾಗಿ ಸ್ಪೇನ್ಗೆ ಪ್ರಯಾಣಿಸಲು ಬಯಸುವ ಆಫ್ರಿಕನ್ ವಲಸಿಗರು ಬಳಸುತ್ತಾರೆ. ಇದು ವಿಶ್ವದ ಅತ್ಯಂತ ಅಪಾಯ ದಾರಿಯಲ್ಲಿ ಒಂದು ಎಂದು ಹೊರಹೊಮ್ಮಿದೆ.
ಮಾಹಿತಿಯ ಪ್ರಕಾರ, ಈ ಕಠಿಣ ದಾರಿಯಲ್ಲಿ ಕಳೆದ ವರ್ಷ 46,000ಕ್ಕೂ ಹೆಚ್ಚು ಪ್ರವಾಸಿಗರು ಪ್ರಯಾಣಿಸಿದ್ದು, ಈವರೆಗೂ 10,000 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಯುರೋಪಿಯನ್ ಒಕ್ಕೂಟ ದೃಢಪಡಿಸಿದೆ.
ಇದನ್ನೂ ಓದಿ: ಭಾರತದಲ್ಲೇ ಸ್ವದೇಶಿ ಯುದ್ದ ನೌಕೆಗಳನ್ನು ತಯಾರಿಸುವ ಗುರಿ ಇದೆ; ರಕ್ಷಣಾ ಸಚಿವ ರಾಜನಾಥ್ ಸಿಂಗ್| Rajnath Singh
ಈ ಘಟನೆ ನಡೆದ ನಂತರ, ಗ್ಯಾಂಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ದಾರಿಯು ಹಲವಾರು ಜನರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದರಿಂದ ಈ ಅಪಾಯಕಾರಿ ಪ್ರಯಾಣಗಳನ್ನು ತೆಗೆದುಕೊಳ್ಳಬೇಡಿ ಎಂದು ತನ್ನ ಪ್ರಜೆಗಳಿಗೆ ಮನವಿ ಮಾಡಿದೆ. (ಏಜೆನ್ಸೀಸ್)