ಪೇಶಾವರ: ಪಾಕಿಸ್ತಾನದ ವಾಯುವ್ಯದಲ್ಲಿರುವ ಖೈಬರ್ ಫಕ್ತುಂಕ್ವಾ ಪ್ರದೇಶದಲ್ಲಿ ಅಫ್ಘಾನಿಸ್ತಾನದಿಂದ ಮಾರ್ಟರ್ ಶೆಲ್ ದಾಳಿ ನಡೆದಿದ್ದು ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಬಾತ್ವಾರ್ ಬಾಂಗ್ರೋ ಎಂಬ ಹಳ್ಳಿಯ ಮನೆಯೊಂದಕ್ಕೆ ಮಾರ್ಟರ್ ಶೆಲ್ ಹೊಡೆದ ಪರಿಣಾಮ ಆ ಮನೆಯಲ್ಲಿದ್ದ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಮನೆ ಸಂಪೂರ್ಣ ನಾಶವಾಗಿದೆ. ಸ್ಥಳೀಯರು, ಜಿಲ್ಲಾಡಳಿತದ ಅಧಿಕಾರಿಗಳು, ರಕ್ಷಣಾ ಪಡೆಗಳು, ಆ್ಯಂಬುಲೆನ್ಸ್ ಸ್ಥಳಕ್ಕೆ ತೆರಳಿದ್ದಾರೆ.
ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯದಿಂದ ಮಾರ್ಟರ್ ಶೆಲ್ ದಾಳಿ ನಡೆದಿದೆ ಎಂದು ಪಾಕ್ನ ಅಧಿಕಾರಿಗಳು ತಿಳಿಸಿದ್ದಾರೆ.(ಪಿಟಿಐ)