ಹಲಗೂರು ಭಿಕ್ಷು ಮಠದ ಸಭಾಂಗಣದಲ್ಲಿ ಗುರುವಾರ ತಂದೆ-ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ವಸ್ತ್ರ, ನೋಟ್ ಪುಸ್ತಕ ಮತ್ತು ಕಲಿಕೋಪಕರಣ ಗಣ್ಯರು ವಿತರಿಸಿದರು. ಡಾ.ಸುನೀಲ್‌ಕುಮಾರ್, ಸುಂದರಪ್ಪ ಲಿಂಗಪಟ್ಟಣ, ಶಶಿಕಲಾ, ಡಾ.ಅರುಣ್‌ಕುಮಾರ್, ಡಾ.ವಿವೇಕ್ ಮಠಪತಿ, ಮನೋಹರ್, ಎನ್.ಕೆ.ಕುಮಾರ್ ಇತರರಿದ್ದರು. 
ನ್ಯೂಸ್

ಸುಂದರಪ್ಪರ ಮಕ್ಕಳ ಸೇವೆ ಶ್ಲಾಘನೀಯ

ಹಲಗೂರು: ದಾನಿಗಳಿಂದ ಕಲಿಕೋಪಕರಣ ಸಂಗ್ರಹಿಸಿ, ಅಗತ್ಯವಿರುವ ಮಕ್ಕಳಿಗೆ ತಲುಪಿಸುವ ಲಿಂಗಪಟ್ಟಣದ ಸುಂದರಪ್ಪ ಲಿಂಗಪಟ್ಟಣ ಅವರ ಸೇವೆ ಶ್ಲಾಘನೀಯ ಎಂದು ಖ್ಯಾತ ಮೂಳೆ ತಜ್ಞ ಡಾ.ಸುನೀಲ್ ಕುಮಾರ್ ತಿಳಿಸಿದರು.

ಹಲಗೂರು ಭಿಕ್ಷು ಮಠದ ಸಭಾಂಗಣದಲ್ಲಿ ಗುರುವಾರ ಸಂಜೆ ತಂದೆ-ತಾಯಿ ಇಲ್ಲದ ವಿದ್ಯಾರ್ಥಿಗಳಿಗೆ ಲಿಂಗಪಟ್ಟಣದ ಸುಂದರಪ್ಪ ಆಯೋಜಿಸಿದ್ದ ನೋಟ್ ಪುಸ್ತಕ ಮತ್ತು ಕಲಿಕೋಪಕರಣ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಅರುಣ್‌ಕುಮಾರ್ ಮಾತನಾಡಿ, ನಗು ಫೌಂಡೇಷನ್ ವತಿಯಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ದಂತ ತಪಾಸಣೆ ಕಾರ್ಯಕ್ರಮ ಆಯೋಜಿಸುತ್ತಿದ್ದು, ಆಸಕ್ತರು ಮನವಿ ನೀಡಿದರೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಬಿರ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಆಯೋಜಕರಾದ ಸುಂದರಪ್ಪ ಲಿಂಗಪಟ್ಟಣ ಮಾತನಾಡಿ, ಯಾವುದೇ ಜಾತಿ, ಧರ್ಮ, ಭೇದ ಎಣಿಸದೆ ತಾಲೂಕಿನಲ್ಲಿ ತಂದೆ-ತಾಯಿ ಇಲ್ಲದ ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಎಲ್ಲರಿಗೂ ಪ್ರತಿ ವರ್ಷ ದಾನಿಗಳಿಂದ ಸಂಗ್ರಹಿಸಿ, ಕೈಲಾದ ಪರಿಕರಗಳನ್ನು ವಿತರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶ್ರಮಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಡಾ.ಅರುಣ್‌ಕುಮಾರ್, ಡಾ.ವಿವೇಕ್ ಮಠಪತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್, ಎನ್.ಕೆ.ಕುಮಾರ್, ಎಚ್.ಆರ್.ಪದ್ಮನಾಭ್, ಶ್ರೀನಿವಾಸಾಚಾರಿ, ಕಾರ್ಯಕ್ರಮ ಅಯೋಜಕರಾದ ಸುಂದ್ರಪ್ಪ, ಬೋರೇಗೌಡ, ಜಿ.ಎಸ್.ಕೃಷ್ಣ, ಸಾವಯವ ಕೃಷಿಕ ಮಹೇಶ್‌ಕುಮಾರ್, ನಿವೃತ್ತ ಸೈನಿಕ ಸುರೇಶ್, ಮೋದಿ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.