ನ್ಯೂಸ್

ಯುವತಿ ತಬ್ಬಿಕೊಂಡಿದ್ದ ಸೆಕ್ಯುರಿಟಿ ಗಾರ್ಡನ್ ಸೆರೆ

ಬೆಂಗಳೂರು: ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದ ಪಿ.ಜಿ ಸೆಕ್ಯುರಿಟಿ ಗಾರ್ಡನ್ ಅನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭದ್ರತಾ ಸಿಬ್ಬಂದಿ ರುದ್ರಯ್ಯ ಬಂಧಿತ ಆರೋಪಿ.

ಪಶ್ಚಿಮ ಬಂಗಾಳದ ೧೯ ವರ್ಷದ ಯುವತಿ ಸಮೀಪದ ಕಾಲೇಜಿನಲ್ಲಿ ವಾಸ್ಯಂಗ ಮಾಡುತ್ತಿದ್ದಾರೆ. ಅ.೨೪ ರ ರಾತ್ರಿ ೧೧.೩೦ ರ ವೇಳೆ ಪಿ.ಜಿಯ ಸ್ಟೇರ್‌ಕೇಸ್ ಮೇಲಿಟ್ಟಿದ್ದ ಲೈಟರ್ ತೆಗೆದುಕೊಳ್ಳಲು ಯುವತಿ ಹೋದ ಸಂದರ್ಭದಲ್ಲಿ ಆಕೆಯನ್ನು ತಬ್ಬಿಕೊಂಡು ಮತ್ತು ನೀಡಿದ್ದ. ಈ ಬಗ್ಗೆ ಯುವತಿ

ಪಿ.ಜಿ. ಮಾಲೀಕರು ಮತ್ತು ಮಹಿಳಾ ವಾರ್ಡನ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಾಲೀಕರು ಹಾಗೂ ವಾರ್ಡನ್ ಸ್ಥಳಕ್ಕೆ ಬಂದು, ವಾರ್ಡನ್ ಸಂತೈಸಿ, ಭದ್ರತಾ ಸಿಬ್ಬಂದಿ ಎಸಗಿದ್ದ ಕೃತ್ಯ ರೆಕಾರ್ಡ್ ಆಗಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಡಿಲೀಟ್ ಮಾಡಿದ್ದರು. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪಿ.ಜಿ ಮಾಲೀಕರು ಮತ್ತು ವಾರ್ಡನ್ ಸಿಸಿ ಕ್ಯಾಮರಾ ದೃಶ್ಯಾವಳಿ ಅಳಸಿ ಹಾಕಿ ಯಾರೊಂದಿಗೆ ಹೇಳದಂತೆ ಬೆದರಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.