ನವದೆಹಲಿ: ರಸಾಯನಶಾಸ್ತ್ರ ವಿಭಾಗದಲ್ಲಿ ನೀಡಲಾಗುವ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಈ ಸಲದ ಪ್ರಶಸ್ತಿ ಪ್ರಕಟಣೆ ಇತಿಹಾಸದಲ್ಲೇ ಇದೇ ಮೊದಲು ಎನ್ನುವಂಥ ವಿದ್ಯಮಾನವೊಂದಕ್ಕೆ ಸಾಕ್ಷಿಯಾಗಿದೆ.
ದ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಮೂವರು ರಸಾಯನಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಕೆರೊಲಿನ್ ಆರ್. ಬರ್ಟೊಝಿ, ಮೊರ್ಟೆನ್ ಮೆಲ್ಡಲ್ ಮತ್ತು ಕಾರ್ಲ್ ಬರ್ರಿ ಶಾರ್ಪ್ಲೆಸ್ ಅವರಿಗೆ 'ಫಾರ್ ದ ಡೆವಲಪ್ಮೆಂಟ್ ಆಫ್ ಕ್ಲಿಕ್ ಕೆಮಿಸ್ಟ್ರಿ ಆ್ಯಂಡ್ ಬಯೋಆರ್ಥೊಗೊನಲ್ ಕೆಮಿಸ್ಟ್ರಿ' ವಿಷಯಕ್ಕೆ ಸಂಬಂಧಿಸಿದಂತೆ ನೊಬೆಲ್ ಪ್ರಶಸ್ತಿ ಘೋಷಿಸಿದೆ.
ಈ ಸಲದ ನೊಬೆಲ್ ಪ್ರಶಸ್ತಿಯನ್ನು ಈ ಮೂವರೂ ಹಂಚಿಕೊಳ್ಳಲಿದ್ದು, ಆ ಪೈಕಿ ಒಬ್ಬರಿಗೆ ಇದು ಎರಡನೇ ನೊಬೆಲ್ ಪ್ರಶಸ್ತಿ. ಕಾರ್ಲ್ ಬರ್ರಿ ಶಾರ್ಪ್ಲೆಸ್ ರಸಾಯನಶಾಸ್ತ್ರ ವಿಭಾಗದಲ್ಲಿ ಎರಡನೇ ಸಲ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದು, ಇದು ಇತಿಹಾಸದಲ್ಲೇ ಇದೇ ಮೊದಲು. ಅಮೆರಿಕನ್ ರಸಾಯನಶಾಸ್ತ್ರಜ್ಞರಾಗಿರುವ ಇವರು 20021ರಲ್ಲೂ ನೊಬೆಲ್ ಪ್ರಶಸ್ತಿ ಪಡೆದಿದ್ದರು.