ಧಾರವಾಡ: ಯಾವುದೇ ಕಾರ್ಯಕ್ರಮಕ್ಕೆ ಗಣ್ಯರು ಬರುತ್ತಾರೆ ಎಂದಾಗ ವಿಶೇಷವಾಗಿ ಸ್ವಾಗತಿಸಲು ತಯಾರಿ ನಡೆಸಲಾಗುತ್ತದೆ. ಅದರಲ್ಲೂ ನಮ್ಮ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬರುತ್ತಿದ್ದಾರೆ ಎಂದಾಗ ವಿಭಿನ್ನವಾಗಿ ಸ್ವಾಗತಿಸಲು ಮುಂದಾಗುತ್ತೇವೆ. ಇದೀಗ ಸೆ. 26 ರಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿಯನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಿಮಿಸುತ್ತಿದ್ದಾರೆ. ಈ ವೇಳೆ ಇವರನ್ನು ಸ್ವಾಗತಿಸಲು ರೋಬಾಟ್ ಸಿದ್ಧವಾಗಿದೆ.
ಧಾರವಾಡ ಹೊರವಲಯದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ರೋಬಾಟ್ ಒಂದನ್ನು ಆವಿಷ್ಕರಿಸಿದ್ದಾರೆ. ಕ್ಯಾಂಪಸ್‌ಗೆ ಬರುವ ಗಣ್ಯರನ್ನು ಸ್ವಾಗತ ಮಾಡುವ ಜವಾಬ್ದಾರಿ ಈ ರೋಬಾಟ್ನದ್ದು. ಇದೀಗ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಈ ರೋಬಾಟ್ ಮುಂದಾಗಿದೆ.
ಉದ್ಘಾಟನೆಯ ರಿಮೋಟನ್ನು ರೋಬಾಟ್ ಬಂದು ರಾಷ್ಟ್ರಪತಿಯವರ ಕೈಗಿರಿಸಲು ಪ್ಲ್ಯಾನ್ ಮಾಡಲಾಗಿದೆ. ತಜ್ಞರು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಅವಶ್ಯಕ ಡೇಟಾಗಳನ್ನು ಅಪ್ಲೋಡ್ ಮಾಡಿ ರೋಬಾಟ್ಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.
ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸುವಂತೆ ತಜ್ಞರು ರೋಬಾಟನ್ನು ಸಿದ್ಧಪಡಿಸಿದ್ದಾರೆ. ಇಲ್ಲಿ ನಡೆಯುವ ಇವೆಂಟ್ ಯಾವುದು? ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರಲಿದ್ದಾರೆ? ಭಾರತದ ಪ್ರಧಾನ ಮಂತ್ರಿ ಯಾರು? ಎಂದು ಪ್ರಶ್ನೆಗಳನ್ನು ಕೇಳಿದಾಗ ಸರಿಯಾದ ಉತ್ತರವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಜ್ಞರು ಈ ರೋಬಾಟ್ ಮೂಲಕ ಅನೇಕ ಪ್ರಾಜೆಕ್ಟ್ಗಳನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.