ನ್ಯೂಸ್

ಸರಿಯಾದ ಆಯ್ಕೆ ಮುಖ್ಯ

ಮೋಹನ್​ ಶೆಟ್ಟಿ

ವಲ್ಲಭ ಭಾಯಿ ಪಟೇಲರ ಪುತ್ರಿ ಮಣಿಬೆನ್ ಅವರ ವ್ಯಕ್ತಿತ್ವದ ಇನ್ನಷ್ಟು ಅಂಶಗಳನ್ನು ಮಹಾವೀರ ತ್ಯಾಗಿ ಅವರಿಗೆ ಸುಶೀಲಾ ನಾಯರ್ ವಿವರಿಸುತ್ತ ಹೋದರು. ಮಣಿಬೆನ್ ಅವರು ನೂಲುವುದು ಮಾತ್ರವಲ್ಲದೆ ಎಲ್ಲರಿಗೂ ಉಡುಪುಗಳನ್ನು ತಯಾರಿಸುತ್ತಾರೆ. ಅವರು ಏನನ್ನೂ ವ್ಯರ್ಥ ಮಾಡುವುದಿಲ್ಲ. ಅವರ ಸೀರೆ ಹರಿದುಹೋದಾಗ, ಅವರು ತಮ್ಮ ತಂದೆಯ ಎರಡು ಧೋತಿಗಳನ್ನು ತೇಪೆ ಹಾಕಿ ಧರಿಸುತ್ತಾರೆ ಎಂದರು. ಜೀವನದ ಏರಿಳಿತಗಳ ನಡುವೆ ಸಂತೋಷದ ಹೃದಯವನ್ನು ಕಾಪಾಡಿಕೊಳ್ಳುವ ಈ ಕಲೆಯನ್ನು ಕಲಿತವರು ನಿಜಕ್ಕೂ ಧನ್ಯರು. 90 ವರ್ಷಕ್ಕಿಂತ ಮೇಲ್ಪಟ್ಟ ಒಬ್ಬ ಮಹಿಳೆ, ತನ್ನ ಪ್ರೀತಿಯ ಗಂಡನ ನಿಧನದ ನಂತರ, ಕುಟುಂಬದಲ್ಲಿ ಅವಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ವೃದ್ಧಾಶ್ರಮಕ್ಕೆ ಹೋಗಲು ನಿರ್ಧರಿಸಿದಳು. ಅಲ್ಲಿ ಹೋದ ನಂತರ, ತನಗೆ ಕೊಠಡಿ ಹಂಚಿಕೆಯಾಗುವ ಮೊದಲು ತಾಳ್ಮೆಯಿಂದ ಕಾಯಬೇಕಾಯಿತು.

ಕೊನೆಗೆ, ಕೊಠಡಿ ಸಿದ್ಧವಾಗಿತ್ತು, ಮತ್ತು ಒಬ್ಬ ಸೇವಕಿ ಆ ಮಹಿಳೆಯನ್ನು ತನ್ನ ಕೋಣೆಗೆ ಕರೆದೊಯ್ದಳು. ಅವರು ವರಾಂಡಾದಲ್ಲಿ ನಡೆಯುತ್ತಿದ್ದಾಗ, ಸೇವಕಿ ಕೊಠಡಿಯೆಂಬ ಸಣ್ಣ ಜಾಗದ ವಿವರಣೆ ನೀಡಿದಳು. ‘ಓಹ್ ತುಂಬಾ ಚೆನ್ನಾಗಿದೆ! ನನಗೆ ಅದು ತುಂಬಾ ಇಷ್ಟವಾಯಿತು’. ಆ ಮಹಿಳೆ ತುಂಬಉತ್ಸಾಹದಿಂದ ಹೇಳಿದಳು. ಮೇಡಂ, ನೀವು ಇನ್ನೂ ಕೋಣೆಯನ್ನು ನೋಡಿಲ್ಲ! ಎಂದಳು ಸೇವಕಿ. ಅದಕ್ಕವಳು ನಗುತ್ತಾ ಹೇಳಿದಳು: ಸರಿ, ನನ್ನ ಸಂತೋಷಕ್ಕೂ ಕೋಣೆಗೂ ಯಾವುದೇ ಸಂಬಂಧವಿಲ್ಲ. ಕೋಣೆ ಇಷ್ಟವೋ ಇಲ್ಲವೋ ಎಂಬುದು ನನ್ನ ಮನಸ್ಸನ್ನು ನಾನು ಹೇಗೆ ಹೊಂದಿಸಿಕೊಳ್ಳುತ್ತೇನೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಸಂತೋಷವು ನೀವು ಮೊದಲೇ ನಿರ್ಧರಿಸಬಹುದಾದ ವಿಷಯ ಮತ್ತು ನಾನು ಈಗಾಗಲೇ ನನ್ನ ಕೋಣೆಯನ್ನು, ಸುತ್ತಲಿನ ಜನರನ್ನು, ನನ್ನ ಜೀವನವನ್ನು ಪ್ರೀತಿಸಲು ನಿರ್ಧರಿಸಿದ್ದೇನೆ. ನಿಜ, ನಮ್ಮೆಲ್ಲರಲ್ಲಿರುವ ದೊಡ್ಡ ಆಸ್ತಿ ಎಂದರೆ ನಾವು ಹೇಗೆ ಭಾವಿಸುತ್ತೇವೆ ಎಂಬುದನ್ನು ಆಯ್ಕೆ ಮಾಡುವ ಶಕ್ತಿ. ಸರಿಯಾದ ಆಯ್ಕೆ ಮಾಡಿ ಚೆನ್ನಾಗಿ ಬದುಕೋಣ.