ಕೋಲಾರ/ಬೂದಿಕೋಟೆ: ಪ್ರಕರಣವೊಂದರ ಸಂಬಂಧ ವಶಕ್ಕೆ ಪಡೆದಿದ್ದ ಮೊಬೈಲ್ ವಾಪಸ್ ಕೊಡಲು 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಬಂಗಾರಪೇಟೆ ತಾಲೂಕು ಬೂದಿಕೋಟೆ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಐರೋಡಗಿ ಅವರನ್ನು ಠಾಣೆಯಲ್ಲೇ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ಸುಮಾರು 8 ತಾಸು ಅಧಿಕ ಸಮಯ ವಿಚಾರಣೆಗೆ ಒಳಪಡಿಸಿದರು.
ಗೊಲ್ಲಹಳ್ಳಿಯ ನಾರಾಯಣಸ್ವಾಮಿ ಎಂಬುವವರು ಮಾರ್ಚ್ನಲ್ಲಿ ಸಂಬಂಧಿಕರ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಲು ತೆರಳಿದ್ದರು. ಅಂದು ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು 4 ದಿನ ಬಿಟ್ಟಿ ಬನ್ನಿ ಹೇಳಿದಾಗ ದೂರು ಕೊಡಲು ಹೋದವರು ಮತ್ತು ಪ್ರಕರಣ ದಾಖಲಿಸದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನಾರಾಯಣಸ್ವಾಮಿ ಅವರ ಮೊಬೈಲ್ ಕಿತ್ತುಕೊಂಡು ಕಳಿಸಿದ್ದರು ಎನ್ನಲಾಗಿದೆ.
ಅದಾನ ನಂತರ ೋನ್ ಪಡೆಯಲು ಠಾಣೆಗೆ ತೆರಳಿದ್ದ ವೇಳೆ ನಾವ್ಯಾರೂ ತಗೊಂಡಿಲ್ಲ ಎಂದು ಠಾಣೆಯ ಎಲ್ಲರೂ ವಾದಿಸಿ ಹೊರಗೆ ಕಳಿಸಿದ್ದರು.
ಬಳಿಕ ನಾರಾಯಣಸ್ವಾಮಿ ಗೊಲ್ಲಹಳ್ಳಿ ಗ್ರಾಪಂ ಉಪಾಧ್ಯಕ್ಷ ರಾಮಚಂದ್ರಪ್ಪನಿಗೆ ವಿಷಯ ತಿಳಿಸಿದ್ದು, ಕೆಲ ದಿನಗಳ ಬಳಿಕ ಉಪಾಧ್ಯಕ್ಷ ರಾಮಚಂದ್ರಪ್ಪ ೋನ್ ಕೊಡಲು 10 ಸಾವಿರ ರೂ. ಲಂಚ ಕೊಡಬೇಕೆಂದು ತಿಳಿಸಿದ್ದಾರೆ.
ಇದರಿಂದ ಬೇಸತ್ತ ನಾನಾರಾಯಣಸ್ವಾಮಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಲಂಚ ನೀಡಲು ಸೋಮವಾರ ದಿನ ನಿಗದಿ ಮಾಡಿ ಬೂದಿಕೋಟೆ ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ರಾಮಚಂದ್ರಪ್ಪ, ನಾರಾಯಣಸ್ವಾಮಿ ಅವರಿಂದ ಹಣ ಪಡೆದು ಬಳಿಕ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಲೋಕಾಯುಕ್ತ ಇನ್ಸ್ಪೆಕ್ಟರ್ ರೇಣುಕಾ ಮತ್ತು ತಂಡ ದಾಳಿ ಮಾಡಿ ರಾತ್ರಿವರೆಗೂ ವಿಚಾರಣೆ ನಡೆಸಿ, ಲಂಚ ನೀಡಲು ದಲ್ಲಾಳಿ ರೀತಿ ಕೆಲಸ ಮಾಡಿದ್ದ ರಾಮಚಂದ್ರಪ್ಪ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಐರೋಡಗಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.