ನ್ಯೂಸ್

ಪ್ರವಾದಿ(ಸ)ಯವರ ದುಆ

ಸುದೀಪ್​ ವಿ.ಎನ್​
ಇಸ್ಲಾಂ ಧರ್ಮ ಸ್ವೀಕಾರಿಗಳಿಗೆ, ನವ ಮುಸ್ಲಿಮರಿಗೆ ಈ ದುಆ ಬೋಧಿಸುತ್ತಿದ್ದರು. ‘ಅಲ್ಲಾಹುಮ್ಮಗ್​ಫಿರಲೀ ವರ್​ಹಮ್ನೀ, ವಹ್ದಿನೀ ವಆಫಿನೀ ವರ್​ರೆಕ್​ನೀ (ಓ ಅಲ್ಲಾಹ! ನನ್ನ ಪಾಪಕರ್ಮಗಳನ್ನು ಕ್ಷಮಿಸು, ನನ್ನ ಮೇಲೆ ಕರುಣೆ ತೋರು. ನನ್ನನ್ನು ನೇರ ಮಾರ್ಗದಲ್ಲಿ ನಡೆಸು. ನನಗೆ ಧಾರ್ವಿುಕ, ನೈತಿಕ, ಶಾರೀರಿಕ ಶಕ್ತಿ ನೀಡು. ಮತ್ತು ನನಗೆ ಜೀವನಾಧಾರವನ್ನು ಕರುಣಿಸು.) ಮಾರನೇ ದಿನ ರಾತ್ರಿ ಮಲಗುವಾಗ ಈ ದುಆ ಕೋರಿದರು.ಹ.ಅಬೂ ಹುರೈರಾ(ರ) ಹೇಳುತ್ತಾರೆ, (ಪ್ರವಾದಿ(ಸ) ಅವರು ರಾತ್ರಿ ಮಲಗುವಾಗ ತಮ್ಮ ಬಲ ಹಸ್ತವನ್ನು ತಮ್ಮ ಕೆನ್ನೆಯಡಿಯಲ್ಲಿಡುತ್ತಿದ್ದರು) ಮತ್ತು ಹೀಗೆ ಹೇಳುತ್ತಿದ್ದರು; ನನ್ನ ಪ್ರಭೂ! ನಿನ್ನ ನಾಮದೊಂದಿಗೆ ನಾನು ನನ್ನ ಪಾರ್ಶ್ವವನ್ನು ಹಾಸಿಗೆಯಲ್ಲಿರಿಸಿದೆನು. ನಿನ್ನ ನಾಮದಿಂದಲೇ ಅದನ್ನು ಹಾಸಿಗೆಯಿಂದ ಎತ್ತುವೆನು.

ನಾನು ಮಲಗಿರುವಾಗ ನೀನು ನನ್ನ ಪ್ರಾಣ ತೆಗೆಯುವುದಾದರೆ ಅದರ ಮೇಲೆ ಕೃಪೆ ತೋರು. ಇನ್ನು ಜೀವಿಸಲು ಇನ್ನಷ್ಟು ಕಾಲಾವಕಾಶ ನೀಡುವುದಾದರೆ ನಿನ್ನ ಸಜ್ಜನ ದಾಸರನ್ನು ರಕ್ಷಿಸುವಂತೆ ನನ್ನನ್ನು ರಕ್ಷಿಸು! ಪ್ರವಾದಿ(ಸ)ಯವರ ಅಭಯಯಾಚನೆ ಮಹತ್ವ ಪೂರ್ಣವಾದುದಾಗಿರುತ್ತಿತ್ತು! ಪ್ರವಾದಿ ಹೀಗೆ ಪ್ರಾರ್ಥಿಸುತ್ತಿದ್ದರು: ‘ಓ ಅಲ್ಲಾಹ್! ನಾನು ಕಳವಳ, ದುಃಖ ಅವಮಾನ, ಆಲಸ್ಯ, ಸಾಲದಹೊರೆ ಮತ್ತು ದುಷ್ಟರ ಆಕ್ರಮಣದಿಂದ ನಿನ್ನ ಅಭಯ ಯಾಚಿಸುತ್ತೇನೆ’. ಅಲ್ಲಾಹನ ಅಭಯ ಯಾಚಿಸುವುದೆಂದರೆ ದಾಸನಿಗೆ ತನ್ನ ದುರ್ಬಲ ಹಾಗೂ ಅಸಹಾಯಕತೆಯ ಪ್ರಜ್ಞೆಯಿಂದ ತಾನು ದುರ್ಬಲನಾಗಿರುವುದರಿಂದ ಶಕ್ತಿವಂತ ಒಡೆಯ ಮತ್ತು ಪ್ರತಾಪಿಯಾದ ಅಲ್ಲಾಹನೊಡನೆ, ಬರಲಿರುವ ಸಂಕಷ್ಟಗಳಿಂದ ತನ್ನನ್ನು ಪಾರು ಮಾಡಬೇಕೆಂದು ಭಿನ್ನವಿಸುತ್ತಾನೆ. ಕಷ್ಟಕಾರ್ಪಣ್ಯಗಳು ಉಂಟಾಗುವಾಗಿನ ದುಗುಡ ಅವಮಾನ, ಆಲಸ್ಯ ಮುಂತಾದವುಗಳಿಂದ ರಕ್ಷಿಸುವಂತೆ ಬೇಡುತ್ತಾನೆ. ಹಾಗೆಸಾಲದ ಹೊರೆ ಮತ್ತು ದುಷ್ಟರ ಆಕ್ರಮಣದಿಂದ ಪಾರುಗೊಳಿಸುವಂತೆ ಕೋರುತ್ತಾನೆ. ಯಾರು ‘ಲಾ ಇಲಾಹಾ ಇಲ್ಲಲ್ಲಾಹ್’ (ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ) ಎಂದು ಹೇಳುವರೋ ಅವರಿಗೆ ಅಲ್ಲಾಹನ ಬಳಿ ಸ್ವರ್ಗದ ವಾಗ್ದಾನವಿದೆ. ಸ್ವರ್ಗದಲ್ಲಿ ತಮ್ಮ ಕಣ್ಣುಗಳು ಯಾವುದನ್ನು ನೋಡುವುವೋ ಅದನ್ನೇ ನನ್ನ ಕಣ್ಣುಗಳು ಕಾಣಬಲ್ಲವು ಎಂದರು.