ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ರೌಡಿಗಳ ಮೊಬೈಲ್ಗಳು ಸಕ್ರಿಯವಾಗಿದ್ದು, ಜೈಲ್ಲಿನಿಂದಲ್ಲೇ ಇನ್ ಸ್ಟಾಗ್ರಾಂ ಮೂಲಕ ಸಾಕ್ಷಿದಾರನೊಬ್ಬನಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.
ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಇನ್‌ಸ್ಟಾ ಗ್ರಾಂ ಮೂಲಕ ವಾಯ್ಸ್ ಮೇಸೆಜ್ ಮಾಡಿ ಬೆದರಿಕೆ ಹಾಕಲಾಗಿದೆ.
ಜೈಲ್ಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮು ಎಂಬಾತನಿಂದ ಬೆದರಿಕೆ
ಪ್ರಕರಣದ ಸಾಕ್ಷಿದಾರನಾದ ಆಟೋ ಚಾಲಕ ಆಮುರ್ಗಂಗೆ ಸೆಪ್ಟೆಂಬರ್ ೨೨ ರಂದು ಸಲಗ ಸೋಮ ಎಂಬ ಹೆಸರಿನ ಇನ್‌ಸ್ಟಾ ಗ್ರಾಂ ಐಡಿಯಿಂದ ಮೂರು ವಾಯ್ಸ್ ಮೇಸೆಜ್ ಬಂದಿದ್ದು, ಅದರಲ್ಲಿ ಜೋಸೆಫ್ ಬಾಬು ಕೊಲೆ ಕೇಸ್‌ನಲ್ಲಿ ಯಾರೊಬ್ಬರು ಕೋರ್ಟ್‌ನಲ್ಲಿ ಸಾಕ್ಷಿ ಹೇಳಬಾರದು.
ಬಬ್ಲಿ ಹೆಂಡತಿ, ಸುನೀಲ ಮತ್ತು ನಾದನಿಗೂ ಈ ಮೇಸೆಜ್ ತಲುಪಿಸು. ನಾನು ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ ಎಂದು ಆಮುರ್ಗಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಷ್ಟೇ ಅಲ್ಲದೇ ವಿವೇಕನಗರದಲ್ಲಿ ನಡೆದ ರೌಡಿ ಮಿಲ್ಟ್ರಿ ಸತೀಶ್ ಹತ್ಯೆ ಬಗ್ಗೆಯೂ ಆರೋಪಿ ಮಾತನಾಡಿದ್ದು, ನಾವು ಜೈಲಿನಲ್ಲಿ ಕೂತೇ ಮಿಲ್ಟ್ರಿ ಸತೀಶನ ಹೊಡೆಸಿದ್ದು ಗೊತ್ತಲ್ಲಾ, ನಮ್ಮ ಬಾಸ್ ಯಾರು ಗೊತ್ತಲ್ಲಾ ಶಿವ. ಅವನು ಹೇಳಿದಾಗೆ ಕೇಳದೆ ಇದ್ದರೆ ಜೈಲಿನಲ್ಲಿ ಕೂತುಕೊಂಡು ಎಲ್ಲರನ್ನು ಹೊಡೆದುಯುತ್ತೇವೆ. ಆಟೋ ಓಡಿಸುವ ನಿನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಎ್ಐಆರ್ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.