ನವದೆಹಲಿ: ದೃಢ ಜಾಗತಿಕ ಪ್ರವೃತ್ತಿಯ ನಡುವೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 2,000 ರೂ. ಏರಿಕೆಯಾಗಿ 10 ಗ್ರಾಂಗೆ 1,27,900 ರೂ.ಗೆ ತಲುಪಿದೆ. ಸೋಮವಾರ ಶೇ. 99.9 ಶುದ್ಧತೆಯ ಚಿನ್ನ 1,300 ರೂ. ಏರಿಕೆಯಾಗಿ 1,25,900 ರೂ.ಗೆ ತಲುಪಿತ್ತು. ಶೇ. 99.5 ಶುದ್ಧತೆಯ ಚಿನ್ನ ಸೋಮವಾರ 1,25,300 ರೂ. ಇದ್ದದ್ದು ಬುಧವಾರ 1,27,300 ರೂ.ಗೆ ತಲುಪಿದೆ. ಬೆಳ್ಳಿಯ ಬೆಲೆ ಬುಧವಾರ 5,540 ರೂ. ಏರಿಕೆಯಾಗಿ ಕಿಲೋಗ್ರಾಂಗೆ 1,61,300 ರೂ.ಗೆ ತಲುಪಿದೆ. ಇದು ಸೋಮವಾರ 1,55,760 ರೂ. ಇತ್ತು.
ಈಗ 10 ಗ್ರಾಂಗೆ - ರೂ. 1,27,900
ಬೆಳ್ಳಿ ಬೆಲೆ -ರೂ. 5,540 ಏರಿಕೆ