ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್‌ಐಟಿಕೆ) ನಗರ ಅಧಿಕೃತ ಭಾಷಾ ಅನುಷ್ಠಾನ ಸಮಿತಿ (ಟಿಒಎಲ್‌ಐಸಿ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಜಭಾಷಾ ಶೀಲ್ಡ್ ಮುಡಿಗೇರಿಸಿಕೊಂಡಿದೆ.
ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್‌ಐಟಿಕೆ) ನಗರ ಅಧಿಕೃತ ಭಾಷಾ ಅನುಷ್ಠಾನ ಸಮಿತಿ (ಟಿಒಎಲ್‌ಐಸಿ) ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಜಭಾಷಾ ಶೀಲ್ಡ್ ಮುಡಿಗೇರಿಸಿಕೊಂಡಿದೆ.
ಮಂಗಳೂರಿನ ಯೂನಿಯನ್ ಬ್ಯಾಂಕ್‌ನಲ್ಲಿ ನಡೆದ ಟಿಒಎಲ್‌ಐಸಿಯ 78ನೇ ಅರ್ಧವಾರ್ಷಿಕ ಸಭೆಯಲ್ಲಿ, 50ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಕೇಂದ್ರ ಸರ್ಕಾರಿ ಕಚೇರಿಗಳ ವಿಭಾಗದಲ್ಲಿ 2025-26ನೇ ಸಾಲಿನ ಅಧಿಕೃತ ಭಾಷೆ ಹಿಂದಿಯ ಅತ್ಯುತ್ತಮ ಅನುಷ್ಠಾನಕ್ಕಾಗಿ ಎನ್‌ಐಟಿಕೆಗೆ ಈ ಗೌರವ ಸಂದಿದೆ.
ಬೆಂಗಳೂರಿನ ಪ್ರಾದೇಶಿಕ ಅನುಷ್ಠಾನ ಕಚೇರಿಯ ಉಪ ನಿರ್ದೇಶಕ ನಿರ್ಮಲ್ ಕುಮಾರ್ ದುಬೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಟಿಒಎಲ್‌ಐಸಿ ಅಧ್ಯಕ್ಷ ಸತ್ಯನ್ ಪೆಲುಗುಲ ಹಾಗೂ ಬ್ಯಾಂಕ್ ಆಫ್ ಬರೋಡಾದ ವಲಯ ಮುಖ್ಯಸ್ಥ ರಾಜೇಶ್ ಖನ್ನಾ ಉಪಸ್ಥಿತರಿದ್ದರು.
ಎನ್‌ಐಟಿಕೆ ಪರವಾಗಿ ಉಪ ನಿರ್ದೇಶಕ ಪ್ರೊ. ಸುಭಾಷ್ ಸಿ. ಯಾರಗಲ್ ಮತ್ತು ಹಿಂದಿ ಅಧಿಕಾರಿ ನಿಖಿತಾ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ನಡೆದ ವಿವಿಧ ಅಂತರ-ಕಚೇರಿ ಹಿಂದಿ ಸ್ಪರ್ಧೆಗಳಲ್ಲಿ ಎನ್‌ಐಟಿಕೆಯ ಬೋಧಕೇತರ ಸಿಬ್ಬಂದಿ ಗಮನಾರ್ಹ ಸಾಧನೆ ಮಾಡಿದ್ದಾರೆ. ನೃತ್ಯ ಸ್ಪರ್ಧೆಯಲಿ ನೆಮ್ಮ ಮತ್ತು ಅಶ್ವಿತಾ ಪ್ರಥಮ ಸ್ಥಾನ ಪಡೆದರೆ, ಸಂಸ್ಥೆಯು ಹಿಂದಿ ಬೆರಳಚ್ಚು (ಟೈಪಿಂಗ್) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಚಿತ್ರಕಥಾ ಸ್ಪರ್ಧೆಯಲ್ಲಿ ಹಣಕಾಸು ವಿಭಾಗದ ಉಪ ಕುಲಸಚಿವ ಇಂಗಿಲೇಲ ಮಹೇಶ್ ತೃತೀಯ ಬಹುಮಾನ ಪಡೆದಿದ್ದಾರೆ.