ನ್ಯೂಸ್

ಶಾಂತ ಮನಸಿಗೆ ಮಾರ್ಗ

‘ಓಹ್’, ಆ ವ್ಯಕ್ತಿ ಉತ್ತರಿಸಿದ, ನನ್ನ ಮೊಮ್ಮಕ್ಕಳು ತುಂಬಾ ಚಿಕ್ಕವರು, ಆದ್ದರಿಂದ ಅವರಿಗೆ ನನ್ನ ಆವಶ್ಯಕತೆ ಹೆಚ್ಚಿದೆಯೆಂದು ನನಗೆ ಅನ್ನಿಸುತ್ತದೆ ಎಂದ. ಕೆಲವು ವರ್ಷಗಳ ನಂತರ, ಕಬೀರ್ ಆ ವ್ಯಕ್ತಿಯ ಮನೆಗೆ ಭೇಟಿ ನೀಡಿ ವೃದ್ಧ ಎಲ್ಲಿದ್ದಾನೆ ಎಂದು ವಿಚಾರಿಸಿದ. ಪುತ್ರರು ಮತ್ತು ಮೊಮ್ಮಕ್ಕಳು ಅವರು ನಿಧನರಾದರು ಎಂದು ಹೇಳಿದರು.ಆಹಾ, ಎಂತಹ ದೊಡ್ಡ ಕರುಣೆ ಎಂದ ಕಬೀರ್ ಹೇಳಿದರು: ‘ಹೇ ಸ್ನೇಹಿತ, ಈ ಅಮೂಲ್ಯವಾದ ಮಾನವ ಜೀವನವನ್ನು ವ್ಯರ್ಥ ಮಾಡಿದೆಯಲ್ಲಾ, ಸ್ವಲ್ಪ ವಾದರೂ ಭಗವಂತನನ್ನು ಸ್ಮರಿಸಿದ್ದರೆ ನಿನಗೆ ಬಹಳ ಒಳ್ಳೆಯದಾಗು ತ್ತಿತ್ತು.’ ಆ ವ್ಯಕ್ತಿ ಜೀವಂತವಾಗಿದ್ದಾಗ, ಅವನು ತನ್ನ ಕುಟುಂಬದೊಂದಿಗೆ ತುಂಬಾ ಬಾಂಧವ್ಯ ಹೊಂದಿದ್ದನು. ಅವನು ಹಸುಗಳು ಮತ್ತು ಎಮ್ಮೆಗಳನ್ನು ಸಹ ನೋಡಿ ಕೊಂಡನು ಮತ್ತು ವಿಶೇಷವಾಗಿ ಒಂದು ಹಸುವಿನ ಮೇಲೆ ಪ್ರೀತಿ ಹೊಂದಿದ್ದನು ಎಂದು ತಿಳಿಯಿತು.

ಕಬೀರ್ ತನ್ನ ಆಂತರಿಕ ದೃಷ್ಟಿಯಿಂದ, ಆ ವ್ಯಕ್ತಿ ಅವಳ ಕರುವಾಗಿ ಪುನರ್ಜನ್ಮ ಪಡೆದಿರುವುದನ್ನು ನೋಡಿದನು! ಭಗವಂತ ನೊಂದಿಗೆ ಇರುವಾಗ ಮಾತ್ರ ಮನಸ್ಸು ಸಂಪೂರ್ಣ ವಿಶ್ರಾಂತಿ ಪಡೆಯುತ್ತದೆ. ಮತ್ತು ಮನಸ್ಸು ಈ ಉನ್ನತ ಆಧ್ಯಾತ್ಮಿಕ ಸಂತೋಷವನ್ನು ಸವಿದ ನಂತರ, ಅದು ಯಾವುದಕ್ಕೂ ಹಂಬಲಿಸುವುದಿಲ್ಲ. ಧಿಲ್ವಾನ್ ಹಳ್ಳಿಯ ಒಬ್ಬ ಮಹಿಳೆ ಸಾಯುತ್ತಿದ್ದಳು. ಅವಳು ತನ್ನ ಕುಟುಂಬದವರೆಲ್ಲರನ್ನೂ ಕರೆದು, ನನ್ನ ಸದ್ಗುರು ಕಾಣಿಸಿಕೊಂಡಿದ್ದಾರೆ.

ನಾನು ಹೊರಡಲು ಸಿದ್ಧನಿದ್ದೇನೆ. ನನ್ನ ಸಾವಿನ ಸಮಯದಲ್ಲಿ ನೀವು ಅಳುವುದಿಲ್ಲ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾನು ನನ್ನ ನಿಜವಾದ ಮನೆಗೆ ಹೋಗುತ್ತಿದ್ದೇನೆ. ನನ್ನ ಸದ್ಗುರು ನನ್ನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಾನೆ. ನನ್ನನ್ನು ಸಂತೋಷಪಡಿಸಲು ಇನ್ನೇನು ಸಾಧ್ಯ? ಎಂದಳು.

ನಮಗೆ ಏನಾಗುತ್ತದೆ? ಅವಳ ಮಕ್ಕಳು ಅವಳನ್ನು ಕೇಳಿದರು. ‘ನಿಮ್ಮನ್ನು ನೀವೇ ನೋಡಿಕೊಳ್ಳಬೇಕು, ನಿಮಗೆ ಶಾಂತಿ ಬೇಕಾದರೆ ನಿಮ್ಮ ಮನಸ್ಸನ್ನು ನೀವೇ ಶಾಂತವಾಗಿಟ್ಟುಕೊಳ್ಳ ಬೇಕು’ ಎಂದು ಅವಳು ಶಾಂತವಾಗಿ ನಿರ್ಲಿಪ್ತತೆಯಿಂದ ಉತ್ತರಿಸಿದಳು.ಮನಸ್ಸನ್ನು ಆತ್ಮದಲ್ಲಿರಿಸುವುದು ಎಂದರೆ ವಿಶ್ರಾಂತಿ ಮಾಡುವುದು, ಆನಂದದ ದೇವಾಲಯದಲ್ಲಿರುವುದು ಎಂದೇ ಅರ್ಥ.