ನ್ಯೂಸ್

ಶಾಂತ ಮನಸಿಗೆ ಮಾರ್ಗ

ಗುರು ವಸಿಷ್ಠ ರಾಮನಿಗೆ ಹೇಳಿದರು: ಯಾರೋ ಹಿಮಾಲಯವನ್ನು ಎತ್ತಿದ್ದಾರೆಂದು ನನಗೆ ಹೇಳಿದರೆ, ಜಗತ್ತಿನಲ್ಲಿ ಅಂತಹ ವ್ಯಕ್ತಿ ಇದ್ದಾನೆ ಎಂದು ನಾನು ಒಂದು ಕ್ಷಣ ಊಹಿಸಬಹುದು. ಯಾರಾದರೂ ಸಮುದ್ರ ವನ್ನೇ ಕುಡಿದಿದ್ದಾರೆ ಎಂದು ಹೇಳಿದರೆ, ಅದು ನಂಬಲಾಗದಂತೆ ತೋರಿದರೂ, ನಾನು ಒಂದು ಕ್ಷಣ ಅವರನ್ನು ನಂಬಬಹುದು. ಯಾರಾದರೂ ಪ್ರಪಂಚದ ಗಾಳಿಯನ್ನು ತನ್ನ ವಶಮಾಡಿಕೊಂಡಿದ್ದಾನೆ ಎಂದು ಯಾರಾದರೂ ಹೇಳಿದರೆ, ಅದನ್ನೂ ನಂಬಬಹುದು.

ಆದಾಗ್ಯೂ, ವಸಿಷ್ಠರು ಹೇಳಿದರು, ಯಾರಾದರೂ ತನ್ನ ಮನಸ್ಸನ್ನು ನಿಯಂತ್ರಿಸಿ ದ್ದೇನೆ ಎಂದು ಹೆಮ್ಮೆಪಡುತ್ತಿದ್ದರೆ, ನಾನು ಅವನನ್ನು ಎಂದಿಗೂ ನಂಬುವುದಿಲ್ಲ. ಮನಸ್ಸನ್ನು ಶಾಂತಗೊಳಿಸಲು ಸುಲಭ ವಾದ ಮಾರ್ಗವಿದೆಯೇ? ಭಗವಂತನಲ್ಲಿ ನಂಬಿಕೆ ಇಡುವುದು ಸುಲಭವಾದ ಮಾರ್ಗ ಎಂದು ಭಗವದ್​ಗೀತೆ ಹೇಳುತ್ತದೆ. ಭಗವಂತನೇ ‘ಯೋಗಕ್ಷೇಮಂ-ವಹಾಮ್ಯಹಂ’ ಎಂದು ವಾಗ್ದಾನ ಮಾಡಿದ್ದಾನೆ.

ಆದ್ದರಿಂದ ನಮ್ಮ ಜವಾಬ್ದಾರಿ ಯಾವಾಗಲೂ ಪ್ರೀತಿಯಿಂದ ಶರಣಾಗತರಾಗಿ ಭಕ್ತಿಯಲ್ಲಿ ಅವನ ಪಾದ ಕಮಲದಲ್ಲಿ ಉಳಿಯುವುದು. ಒಬ್ಬ ಯುವಕ ಗುಜರಾತ್​ನಲ್ಲಿರುವ ಒಬ್ಬ ಮಹಾತ್ಮನ ಬಳಿಗೆ ಹೋಗಿ, ಸ್ವಾಮೀಜಿ, ದೇವರಲ್ಲಿ ನಂಬಿಕೆಯನ್ನು ಹೇಗೆ ಬೆಳೆಸುವುದು? ಎಂದು ಕೇಳಿದನು. ಸ್ವಾಮೀಜಿ ಅವನನ್ನು ನೋಡಿ, ನಾನು ಏನು ಹೇಳಿದರೂ ಮಾಡುತ್ತೀಯಾ? ಎಂದು ಕೇಳಿದರು. ಆ ಹುಡುಗ, ಸಿದ್ಧನಿದ್ದೇನೆ ಸ್ವಾಮೀಜಿ. ನಾನು ನಿಮಗೆ ಶರಣಾಗತನಾಗಿದ್ದೇನೆ ಎಂದು ಹೇಳಿದ.

ಸ್ವಾಮಿಜಿ ಹೇಳಿದರು, ಸರಿ, ಕೋಣೆಗೆ ಹೋಗು, ನಿನ್ನ ಎಲ್ಲಾ ಬಟ್ಟೆಗಳನ್ನು ತೆಗೆದುಹಾಕು, ಬೆತ್ತಲೆಯಾಗಿಯೇ ಇರು ಮತ್ತು 12 ವರ್ಷಗಳ ಕಾಲ ಮೌನವಾಗಿರುತ್ತೇನೆ ಎಂದು ಪ್ರತಿಜ್ಞೆ ಮಾಡು. ಎಂದರು. ಆ ಹುಡುಗ ಆಘಾತಕ್ಕೊಳಗಾದ! ಮಹಾತ್ಮನಿಗೆ ನಮಸ್ಕರಿಸಿ, ಆಳವಾದ ವಿಚಾರಮಾಡುತ್ತ ಹಿಂತಿರುಗಿದ. ನಾನು ಬೆತ್ತಲೆಯಾದರೆ ನನ್ನ ಮನೆಯಿಂದ ಹೊರಬರಲೂ ಸಾಧ್ಯವಾಗುವುದಿಲ್ಲ. ಮೌನ ಪ್ರತಿಜ್ಞೆ ಮಾಡಿದರೆ ನನಗೆ ಆಹಾರ ಕೇಳಲೂ ಸಾಧ್ಯವಿಲ್ಲ. ನಾನು ಹೇಗೆ ಬದುಕುತ್ತೇನೆ? ಇದು ಅಸಾಧ್ಯ. ಇದೆಲ್ಲ ಬೇಡ ಸುಮ್ಮನೆ ಮನೆಗೆ ಹೋದರಾಯಿತು, ಈ ಮಹಾತ್ಮರ ಸಹವಾಸವೇ ಬೇಡ ಅಂದುಕೊಂಡ.