ನ್ಯೂಸ್

ವಕ್ಫ್ ತಿದ್ದುಪಡಿ ಬಿಲ್ ಅಂಗೀಕಾರದಿಂದ ಹೋರಾಟ ಸಾರ್ಥಕ: ರಮೇಶ್ ಜಾರಕಿಹೊಳಿ | Agitation against cong govt

ಬೆಂಗಳೂರು: ವಕ್ಫ್ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರವಾಗಿ ‘ಉಮೀದ್ ಕಾಯ್ದೆ’ಯಾಗಿ ಅನುಷ್ಠಾನಕ್ಕೆ ಬರುತ್ತಿದೆ. ವಕ್ಫ್ ಮಂಡಳಿ ಆಸ್ತಿ ಕಬಳಿಕೆ ವಿರುದ್ಧ ರಾಜ್ಯದಲ್ಲಿ ನಡೆಸಿದ ಹೋರಾಟ ಸಾರ್ಥಕವಾಗಿದೆ ಎಂದು ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.

ಜಂಟಿಯಾಗಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬೆಲೆ ಏರಿಕೆ, ಸಾಲ ಮಾಡಿ ಅಭಿವೃದ್ಧಿ ಮಾಡುವಂತಹ ಪರಿಸ್ಥಿತಿ ತಂದಿದ್ದನ್ನು ವಿರೋಧಿಸಿ ಪಕ್ಷದ ಬಲಿಷ್ಠ ಹೋರಾಟ ನಡೆಯಲಿದೆ ಎಂದರು.

ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಟದ ಅಗತ್ಯವಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಪಕ್ಷದ ಸಂಘಟನೆಯನ್ನು ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ತರುವುದಕ್ಕಾಗಿ ಶ್ರಮಿಸುತ್ತೇವೆ ಎಂದು ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹೇಳಿದರು.