ನವದೆಹಲಿ: ಭಾರತೀಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು 2019ರ ಬಾಲಾಕೋಟ್ ದಾಳಿ ವೇಳೆ ಸೆರೆ ಹಿಡಿದಿದ್ದೆ ಎಂದು ಹೇಳಿಕೊಂಡಿದ್ದ ಪಾಕ್ ಸೈನಿಕ ಮೇಜರ್ ಸೈಯದ್ ಮುಯಿಝ್ನನ್ನು ತೆಹ್ರೀಕ್-ಐ-ತಾಲಿಬಾನ್- ಇ-ಪಾಕಿಸ್ತಾನ್(ಟಿಟಿಪಿ) ಹತ್ಯೆ ಮಾಡಿದೆ ಎಂಬ ಸಂಗತಿ ಹೊರಬಿದ್ದಿದೆ.
ಟಿಟಿಪಿ ಪಾಕ್-ಅಫ್ಘನ್ ಗಡಿಯಲ್ಲಿ ಕಾರ್ಯಾಚರಿಸುವ ಸಶಸ್ತ್ರ ಇಸ್ಲಾಮಿಕ್ ಸಂಘಟನೆಯಾಗಿದೆ. ಸೈಯದ್ನನ್ನು ಪಾಕ್ನ ಸ್ಪೆಷಲ್ ಸರ್ವಿಸ್ ಗ್ರೂಪ್ನ 6ನೇ ಕಮಾಂಡೋ ಬಟಾಲಿಯನ್ನಲ್ಲಿ ನಿಯೋಜಿಸಲಾಗಿದ್ದು, ಆತನನ್ನು ಪಾಕ್ನ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸರಾಗೋಹ ಪ್ರದೇಶದಲ್ಲಿನ ಸೆಣಸಾಟದಲ್ಲಿ ಹತ್ಯೆ ಮಾಡಲಾಗಿದೆ. ಆತನನ್ನು ತಾವೇ ಹತ್ಯೆ ಮಾಡಿದ್ದಾಗಿ ಪಾಕಿಸ್ತಾನಿ ತಾಲಿಬಾನಿ ಎಂದೂ ಕರೆಯಲಾಗುವ ಟಿಟಿಪಿ ಘೋಷಣೆ ಮಾಡಿದೆ. ಬಾಲಾಕೋಟ್ ದಾಳಿ ವೇಳೆ ಅಭಿನಂದನ್ ಅವರನ್ನು ಸೆರೆ ಹಿಡಿದಿದ್ದ ಪಾಕ್ ಸೇನೆ ಸುಮಾರು 60 ಗಂಟೆಗಳ ಕಾಲ ತಮ್ಮ ವಶದಲ್ಲಿ ಇರಿಸಿಕೊಂಡಿತ್ತು.