ಅಮೆರಿಕಾ: 'ದಿ ಕಾಂಜೂರಿಂಗ್' ಸಿರೀಸ್ನ ಮತ್ತೊಂದು ಹಾರರ್ ಚಿತ್ರ 'ದಿ ನನ್ 2' ಇದೇ ಸೆಪ್ಟಂಬರ್ 08 ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಮುಖೇನ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದೆ.
ವಾರ್ನರ್ ಬ್ರೋಸ್ ಬ್ಯಾನರ್ನಲ್ಲಿ ಮೂಡಿಬಂದಿರುವ 'ದಿ ನನ್ 2' ಚಿತ್ರ ಈ ಹಿಂದೆ 2018ರ ಬ್ಲಾಕ್ಬಸ್ಟರ್ ಹಿಟ್ 'ದಿ ನನ್' ಮೊದಲ ಭಾಗದ ಮುಂದುವರಿದ ಭಾಗವಾಗಿದೆ. ಮೈಕಲ್ ಚೇವ್ಸ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ತೈಸ್ಸಾ ಫಾರ್ಮಿಗಾ ಮತ್ತು ನಾಯಕನಾಗಿ ಜೋನಸ್ ಬ್ಲೋಕೆಟ್ ಅಭಿನಯಿಸಿದ್ದಾರೆ.
ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಅನಾವರಣಗೊಳಿಸಿದ ಚಿತ್ರತಂಡಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಹಾರರ್ ಜಾನರ್ ಇಷ್ಟಪಡುವ ಪ್ರೇಕ್ಷಕರು ಟ್ರೇಲರ್ ಕಂಡು ಫಿದಾ ಆಗಿದ್ದಾರೆ. ಭಯಾನಕ ದೃಶ್ಯಗಳಿಂದ ರೂಪುಗೊಂಡಿರುವ ಚಿತ್ರದ ಬಿಡುಗಡೆಗೆ ಸದ್ಯ ಚಿತ್ರರಸಿಕರು ಕಾತರದಿಂದ ಕಾಯತೊಡಗಿದ್ದಾರೆ.
ಇದನ್ನೂ ಓದಿ: Yediyurappa’s Strict Warning To Karnataka Congress | ಕಾಂಗ್ರೆಸ್ಗೆ ಖಡಕ್ ಎಚ್ಚರಿಕೆ ಕೊಟ್ಟ ಯಡಿಯೂರಪ್ಪ
ಸೆಪ್ಟಂಬರ್ 08 ರಂದು ಬಿಡುಗಡೆಯಾಗಲಿರುವ 'ದಿ ನನ್ 2' ಚಿತ್ರಕ್ಕೆ ಸದ್ಯ ಕ್ಷಣಗಣನೆ ಆರಂಭಗೊಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರ ಅಭಿಪ್ರಾಯ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್).