ನ್ಯೂಸ್

ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 36,216ಕ್ಕೆ ಏರಿಕೆ; ಇಂದು 2 ಸಾವಿರಕ್ಕೂ ಹೆಚ್ಚು ಕೇಸ್​ಗಳು

ಬೆಂಗಳೂರು: ರಾಜ್ಯದಲ್ಲಿ 24 ಗಂಟೆಯಲ್ಲಿ 2,798 ಕೊವಿಡ್​-19 ಪ್ರಕರಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 36,216ಕ್ಕೇರಿದೆ.

ಇಂದು 70 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 880 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 14,716 ಜನರು ಕರೊನಾದಿಂದ ಚೇತರಿಸಿಕೊಂಡಿದ್ದಾರೆ. 613ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 20,883 ಎಂದು ಆರೋಗ್ಯ ಇಲಾಖೆ ಇಂದು ವರದಿ ನೀಡಿದೆ.

ಇಂದು ಬೆಂಗಳೂರು ನಗರದಲ್ಲಿ 1,533ಜನರಲ್ಲಿ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ 186, ಉಡುಪಿ-90, ಮೈಸೂರು-83, ತುಮಕೂರು-78, ಧಾರವಾಡ-77, ಯಾದಗಿರಿ-74, ದಾವಣಗೆರೆ-72, ಕಲಬುರಗಿ, ಬಳ್ಳಾರಿ ತಲಾ-65, ಬೀದರ್​-63, ವಿಜಯಪುರ-48, ಉತ್ತರ ಕನ್ನಡ, ಗದಗ ತಲಾ 40, ಬಾಗಲಕೋಟೆಯಲ್ಲಿ 37, ಹಾಸನ-34, ರಾಮನಗರ-30, ಶಿವಮೊಗ್ಗ-26, ಮಂಡ್ಯ, ಕೊಪ್ಪಳ ತಲಾ 23, ಚಿಕ್ಕಬಳ್ಳಾಪುರ-20, ಚಾಮರಾಜನಗರ-17, ಹಾವೇರಿ-16, ರಾಯಚೂರು-14, ಕೋಲಾರ ಮತ್ತು ಕೊಡಗು ತಲಾ 12, ಚಿತ್ರದುರ್ಗ-9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ ಮತ್ತು ಚಿಕ್ಕಮಗಳೂರಲ್ಲಿ ತಲಾ ಮೂರು ಮಂದಿಯಲ್ಲಿ ಇಂದು ಕರೊನಾ ದೃಢಪಟ್ಟಿದೆ.