ಬೆಂಗಳೂರು: ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ ಒಟ್ಟು 115 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 2533ಕ್ಕೆ ಏರಿದೆ.
ನಿನ್ನೆ ಸಂಜೆ 5ಗಂಟೆಯಿಂದ ಇಂದು ಮಧ್ಯಹ್ನ 12ಗಂಟೆವರೆಗೆ 75ಮಂದಿಯಲ್ಲಿ ಕರೊನಾ ದೃಢಪಟ್ಟಿತ್ತು. ಸಂಜೆ ಹೊತ್ತಿಗೆ ಮತ್ತೂ 40 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಇಂದು 53 ಮಂದಿ ಕರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 834ಕ್ಕೆ ಏರಿದೆ. ಕೊವಿಡ್-19ನಿಂದು ಇದುವರೆಗೆ 47ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು ನಗರ-9ಮಂಡ್ಯ-5ಯಾದಗಿರಿ-7ಉಡುಪಿ-29ಹಾಸನ-13ಬೀದರ್-12ದಕ್ಷಿಣ ಕನ್ನಡ-24ವಿಜಯಪುರ-2ರಾಯಚೂರು-1ಚಿತ್ರದುರ್ಗ-6ಚಿಕ್ಕಮಗಳೂರು-3ಹಾವೇರಿ -4