ಬೆಂಗಳೂರು: ರಾಜ್ಯದಲ್ಲಿ ಕರೊನಾ ಓಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ 2627 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇಂದು 71 ಸೋಂಕಿತರು ಮೃತಪಟ್ಟಿದ್ದು, 693 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 38,843ಕ್ಕೆ ಏರಿದ್ದು, ಸತ್ತವರ ಸಂಖ್ಯೆ ಒಟ್ಟು 684. ಡಿಸ್ಚಾರ್ಜ್ ಆದವರು 15, 409 ಮಂದಿ ಮತ್ತು ಸಕ್ರಿಯ ಪ್ರಕರಣಗಳು 22,746 ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಂದು ಬೆಂಗಳೂ ನಗರದಲ್ಲಿ 1525ಜನರಲ್ಲಿ ಸೋಂಕು ದೃಢಪಟ್ಟಿದೆ. ಹಾಗೇ ದಕ್ಷಿಣ ಕನ್ನಡದಲ್ಲಿ 196, ಧಾರವಾಡ 129, ಯಾದಗಿರಿ 120, ಕಲಬುರಗಿ 79, ಬಳ್ಳಾರಿ 63, ಬೀದರ್ 62, ರಾಯಚೂರು 48, ಉಡುಪಿ 43, ಮೈಸೂರು 42, ಶಿವಮೊಗ್ಗ 42, ಚಿಕ್ಕಬಳ್ಳಾಪುರ 39, ಹಾಸನ 31, ಕೊಪ್ಪಳ 27, ತುಮಕೂರು 26, ಕೋಲಾರ 24, ದಾವಣಗೆರೆ 20, ಬೆಂಗಳೂರು ಗ್ರಾಮಾಂತರ 19, ಕೊಡಗು 15, ಗದಗ 14, ಚಾಮರಾಜನಗರ 13, ಉತ್ತರ ಕನ್ನಡ, ಹಾವೇರಿ ತಲಾ 12, ಚಿಕ್ಕಮಗಳೂರು-10, ಬಾಗಲಕೋಟೆ 7, ಮಂಡ್ಯ 4, ರಾಮನಗರ 3, ಬೆಳಗಾವಿಯಲ್ಲಿ ಎರಡು ಕರೊನಾ ಸೋಂಕಿನ ಪ್ರಕರಣಗಳು ಇಂದು ಕಂಡುಬಂದಿವೆ.