ನವದೆಹಲಿ: ಲಾಕ್ಡೌನ್ನಿಂದಾಗಿ ಕರೊನಾ ವೈರಸ್ ಹರಡುವಿಕೆಯ ನಿಧಾನವಾಗಿ ಆಗಿದ್ದು, ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿರುವ ಕಾರಣ, ನವೆಂಬರ್ ಅಂತ್ಯದ ವೇಳೆಗೆ ಕರೊನಾ ಅತ್ಯಧಿಕವಾಗಿ ತನ್ನ ಪ್ರಭಾವ ಬೀರಲಿದೆ ಎಂಬುದಾಗಿ ತಾನು ಹೇಳಿಯೇ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಸ್ಪಷ್ಟನೆ ನೀಡಿದೆ.
ಭಾರತದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾಗಿರುವ ಐಸಿಎಂಆರ್ ಈ ಸ್ಪಷ್ಟನೆ ನೀಡಿದ್ದು, ಮಾಧ್ಯಮಗಳನ್ನು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿರುವ ವಿಷಯ ಎಂದು ಹೇಳಿದೆ.
ನವೆಂಬರ್ ಮಧ್ಯಭಾಗದಲ್ಲಿ ಐಸಿಯು, ಹಾಸಿಗೆ ಮತ್ತು ವೆಂಟಿಲೇಟರ್ಗಳಿಗೆ ಕೊರತೆ ಬರುವ ಸಾಧ್ಯತೆ ಇದ್ದು, ಇದರಿಂದ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಐಸಿಎಂಆರ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಮಾಡಿರುವ ವರದಿಯನ್ನು ತನ್ನ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಿರುವ ಪರಿಷತ್ತು, ಇದು ಸತ್ಯಕ್ಕೆ ದೂರವಾಗಿರುವ ವಿಷಯ. ಇದನ್ನು ನಂಬಬಾರದು ಎಂದಿದೆ.
ಲಾಕ್ಡೌನ್ನಿಂದಾಗಿ ಕರೊನಾ ವೈರಸ್ ಹರಡುವಿಕೆಯು 34 ರಿಂದ 76 ದಿನಕ್ಕೆ ಮುಂದೂಡಲ್ಪಟ್ಟಿದ್ದು, ಇದೀಗ ಅದು ನವೆಂಬರ್ ವೇಳೆಗೆ ಹೆಚ್ಚಳವಾಗಲಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಹಾದಿತಪ್ಪಿಸುವ ವರದಿ ಎಂದು ಐಸಿಎಂಆರ್ ಹೇಳಿದೆ. (ಏಜೆನ್ಸೀಸ್)