ಬೆಂಗಳೂರು: ನಗರದಲ್ಲಿ ತಡರಾತ್ರಿ ವಿದೇಶಿ ಯುವಕನೋರ್ವನ ಬರ್ಬರ ಕೊಲೆಯಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ನೈಜೀರಿಯಾ ಮೂಲದ ಮಿಂಟೋ ಸಂಡೆ ಕೊಲೆಯಾದ ಯುವಕ. ಮಿಂಟೋ ಮತ್ತು ಮನೋಜ್ ಎಂಬುವನ ನಡುವೆ ಇತ್ತೀಚೆಗಷ್ಟೇ ಜಗಳವಾಗಿತ್ತು. ಮನೋಜ್ ಕಡೆಯವರೇ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)