ನ್ಯೂಸ್

ಪ್ರತಿಪಕ್ಷದ ಕೈವಾಡದ ಶಂಕೆಯೆಂದ ಸಚಿವ

ಬೆಂಗಳೂರು: ಸಿಎಂ, ಡಿಸಿಎಂ ಬೆಂಬಲಿಗರು ಹೇಳಿಕೆ ಕೊಡುವ ವಿಚಾರವಾಗಿ ಚಲುವರಾಯಸ್ವಾಮಿ ಹೇಳಿಕೆ ನೀಡಿ, ರಾಜ್ಯದ ಸಮಯ ಸರಿಯಿಲ್ಲ ಅನಿಸುತ್ತದೆ,ಇಲ್ಲವೇ ಯಾರದ್ದೋ ಕೈವಾಡ ಇರಬಹುದು. ಸರ್ಕಾರ ಚೆನ್ನಾಗಿ ನಡೆಯುತ್ತಿದೆ‌. ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ಥಾನಗಳು ಹೆಚ್ಚಾಗಿವೆ. ಹಾಗಾಗಿ ಇದರಲ್ಲಿ ವಿರೋಧ ಪಕ್ಷಗಳ ಕೈವಾಡ ಇರಬಹುದು ಎಂದರು.

ಶ್ರೀಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಸಾರ್ವಜನಿಕವಾಗಿ ಹಾಗೆ ಹೇಳುವ ಅವಶ್ಯಕತೆಯಿಲ್ಲ. ನಮ್ಮದು ಹೈಕಮಾಂಡ್ ಪಕ್ಷ ಬೇಕಾದರೆ ನಮ್ಮ ಹೈಕಮಾಂಡ್ ಬಳಿ ಮಾತಾನಾಡಬಹುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಬಹುದು ಎಂದರು.

ಸಿಎಂ ಬದಲಾವಣೆ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸಬೇಕು. ಅಲ್ಲದೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಹಳ ಚೆನ್ನಾಗಿಯೇ ಇದ್ದಾರೆ. ಅವರಿಬ್ಬರ ನಡುವೆಯೂ ಹೊಂದಾಣಿಕೆ ಚೆನ್ನಾಗಿದೆ. ಹೈಕಮಾಂಡ್ ಸಹ ಅವರಿಬ್ಬರನ್ನು ಕೂರಿಸಿಕೊಂಡು ಚರ್ಚೆ ಮಾಡುತ್ತದೆ. ಹೈಕಮಾಂಡ್ ಯಾವಾಗ ತೀರ್ಮಾನ ಮಾಡಬೇಕೋ ಆಗ ಮಾಡುತ್ತದೆ ಎಂದರು.

ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಹೇಳುವ ವೇದಿಕೆ ಅದಲ್ಲ ಎನ್ನುವ ಚರ್ಚೆಯಿದೆ.

ಸ್ವಾಮೀಜಿಗಳಿಗೆ ಅಲ್ಲಿ‌ ಇಲ್ಲಿ ಮಾತನಾಡಿ ಎಂದು ನಾವು ನಿರ್ದೇಶನ ನೀಡಲು ಆಗುವುದಿಲ್ಲ. ಅವರ ಭಾವನೆ ಬಂದಾಗ ಹೇಳಿದ್ದಾರೆ ಎಂದು ಹೇಳಿದರು.