ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವಂತೆ ಜಾಗೃತಿ ಮೂಡಿಸುವ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲಿ ಸಕ್ರಿಯವಾಗಿರುವುದು, ಪರಸ್ಪರ ಕರುಣೆಯಿಂದ ಇರುವುದು ಇತ್ಯಾದಿ ವಿಷಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಅದು ಮಿನಿಯನ್ಸ್ ಮತ್ತು ಗ್ರೂವನ್ನು ಬಳಸಿಕೊಂಡು ಮಾಡಿದೆ. ಮಕ್ಕಳನ್ನು ಬಹುಬೇಗ ಆಕರ್ಷಿಸಬಲ್ಲ ಕಾರ್ಟೂನ್ ವಿಡಿಯೋ ಇದು..