ಶಿಕಾರಿಪುರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿಶಿಕ್ಷಕರನ್ನು ಸನ್ಮಾನಿಸಲಾಯಿತು. ಡಾ. ಮಹಂತೇಶ್, ರಾಜಶೇಖರ್, ಇಂದಿರಾ, ಜಬಿವುಲ್ಲಾ ಇತರರಿದ್ದರು. 
ನ್ಯೂಸ್

ಸದ್ವಿಚಾರಗಳಿಂದ ಮನಸ್ಸು ದ್ವೇಷಮುಕ್ತ

ಶಿಕಾರಿಪುರ: ಸದ್ಗುಣ ಮತ್ತು ಸದ್ವಿಚಾರಗಳು ನಮ್ಮನ್ನು ದ್ವೇಷಗಳಿಂದ ಮುಕ್ತರನ್ನಾಗಿಸುತ್ತವೆ ಎಂದು ಸಿದ್ದಲಿಂಗೇಶ್ವರ ಶಾಲೆ ಮುಖ್ಯಶಿಕ್ಷಕ ಜಬೀವುಲ್ಲಾ ಹೇಳಿದರು.

ಪಟ್ಟಣದಲ್ಲಿ ಪ್ರಕೃತಿ ಚಿಕಿತ್ಸಾಲಯ, ಐಶ್ವರ್ಯ ಹೋಮಿಯೋ ಫಾರ್ಮಸಿ, ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ಮಂಡಿ ಚಿಕಿತ್ಸಾ ಶಿಬಿರ, ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮನುಷ್ಯನಿಗೆ ಎಲ್ಲಕ್ಕೂ ಮಿಗಿಲಾದ ಭಾಗ್ಯ ಎಂದರೆ ಆರೋಗ್ಯ. ಆರೋಗ್ಯವಂತನ ಮನಸು ಚಾಂಚಲ್ಯದಿಂದ ಮುಕ್ತವಾಗಿ ಸಧೃಢವಾಗಿರುತ್ತದೆ ಎಂದರು.

ಡಾ. ಮಹಂತೇಶ ಮಾತನಾಡಿ, ಆಯುರ್ವೇದ ಚಿಕಿತ್ಸೆಯು ನಮ್ಮ ಆಯುಷ್ಯ ವೃದ್ಧಿ ಮಾಡುತ್ತದೆ. ಸನಾತನ ಋಷಿ ಮುನಿಗಳ ಕೊಡುಗೆ ಆಯುರ್ವೇದ ಚಿಕಿತ್ಸೆ. ಪ್ರಕೃತಿ ನಮಗೆ ವೈದ್ಯರಿದ್ದಂತೆ, ಪ್ರಕೃತಿ ಚಿಕಿತ್ಸೆ ಎಂದರೆ ಅದು ಧನ್ವಂತರಿ ವಿದ್ಯೆ ಎಂದು ತಿಳಿಸಿದರು. ಶಿಕ್ಷಕರಾದ ಜಬಿವುಲ್ಲಾ, ರಾಜಶೇಖರ್, ಇಂದಿರಾ, ಬಸವಣ್ಣಪ್ಪ, ಮೋನಿಕಾ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಜಿ.ಕೆ.ಹೆಬ್ಬಾರ್, ಹಾಲೇಶಪ್ಪ ಹಂಚಿ, ಪ್ರಭು ಸ್ವಾಮಿ, ಜಯಣ್ಣ, ಡಾ. ನಾಗವೇಣಿ ಎಂ.ಪಾಟೀಲ್ ಇತರರಿದ್ದರು.