ನ್ಯೂಸ್

ಎಚ್ಚರಿಕೆ ಗಂಟೆ ಬಾರಿಸಿದ ಸಿಆರ್​ಪಿಎಫ್ ಯೋಧರ ಕರೊನಾ ಪಾಸಿಟಿವ್ ಪ್ರಕರಣ..!

ನವದೆಹಲಿ: ರಾಷ್ಟ್ರದ ಅತಿದೊಡ್ಡ ಅರೆಸೇನಾ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಭದ್ರತಾ ಪಡೆ (ಸಿಆರ್​ಪಿಎಫ್) ಯ ದೆಹಲಿ ಮೂಲದ ಬಟಾಲಿಯನ್​​ನಲ್ಲಿ ಕೋವಿಡ್- 19 ಸೋಂಕಿತರ ಸಂಖ್ಯೆ 122 ಕ್ಕೇರಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸೋಂಕಿತರು ಇಲ್ಲಿಯ ಮಯೂರ್ ವಿಹಾರ್ ಮೂರನೇ ಹಂತದಲ್ಲಿರುವ 31 ನೇ ಬಟಾಲಿಯನ್​​ನ ಯೋಧರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಈ ಬಟಾಲಿಯನ್​ನ 122 ಯೋಧರಿಗೆ ಕರೊನಾ ಪಾಸಿಟಿವ್ ಬಂದಿದ್ದು, ಇನ್ನೂ 100 ಜನರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ 12 ಯೋಧರಿಗೆ ಸೋಂಕು ತಗುಲಿದ್ದು, ಕಳೆದ ವಾರವಷ್ಟೇ ಈ ಬಟಾಲಿಯನ್​ನ 55 ವರ್ಷದ ಸಬ್ ಇನ್ಸ್​​ಪೆಕ್ಟರ್ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದರು. ಈಗ ಸೋಂಕಿತರ ಸಂಖ್ಯೆ 122 ಕ್ಕೇರಿದ್ದು, ಆತಂಕ ಸೃಷ್ಟಿಸಿದೆ . (ಏಜೆನ್ಸೀಸ್)

ಇದನ್ನೂ ಓದಿ.

f